ಮಂಜೇಶ್ವರ: ಮಂಜೇಶ್ವರದಲ್ಲಿ ಮದ್ರಸಾ ವಠಾರದಲ್ಲಿ ಒಂಬತ್ತರ ಹರೆಯದ ಬಾಲಕಿಯನ್ನು ಏಕಾಏಕಿ ಎತ್ತಿ ರಸ್ತೆಗೆ ಎಸೆಯುವ ಮೂಲಕ ಯುವಕನೊಬ್ಬ ಕ್ರೌರ್ಯ ಮೆರೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಕುಂಜತ್ತೂರು ಸನಿಹದ ಉದ್ಯಾವರ ನಿವಾಸಿ ಅಬೂಬಕ್ಕರ್ ಸಿದ್ದಿಕ್(30)ಆರೋಪಿ. ಈತನ ವಿರುದ್ಧ ಕೊಲೆ ಯತ್ನ ಜತೆಗೆ ಪೋಕ್ಸೋ ಕಾಯ್ದೆ ಅನ್ವಯ ಕೇಸು ದಾಖಲಿಸಲಾಗಿದೆ. ಈ ಮಧ್ಯೆ ಗಾಯಗೊಂಡ ಬಾಲಕಿ ಲಿಯಾ ಫಾತಿಮಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ರಸಾದಿಂದ ಬಾಲಕಿ ಹೊರ ಬರುತ್ತಿದ್ದಂತೆ ವರಾಂಡಕ್ಕೆ ಆಗಮಿಸಿದ ಅಬೂಬಕ್ಕರ್ ವಿನಾಕಾರಣ ಬಾಲಕಿಯನ್ನು ಎತ್ತಿ ರಸ್ತೆಗೆ ಎಸೆದಿದ್ದಾನೆ. ಈತನ ಕೃತ್ಯದ ಸಿಸಿ ಟಿವಿ ದೃಶ್ಯಾವಳಿಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೆಲಕ್ಕೆ ಬಿದ್ದ ಬಾಲಕಿ ಎದ್ದೇಳಲು ಯತ್ನಿಸಿದರೂ, ಅಬೋಧಾವಸ್ಥೆಯಲ್ಲಿ ಮತ್ತೆ ಬಿದ್ದಿದ್ದಾಳೆ. ಅಲ್ಪ ಹೊತ್ತಿನ ನಂತರ ಮನೆಗೆ ತೆರಳಿದ ಬಾಲಕಿ ಮನೆಯವರಲ್ಲಿ ವಿಷಯ ತಿಳಿಸಿದ್ದು, ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಳಿಸಿಕೊಂಡಿದ್ದಾರೆ.
ಬಾಲಕಿಯನ್ನು ಎತ್ತಿ ರಸ್ತೆಗೆಸೆದ ಯುವಕ: ಕ್ರೌರ್ಯಮೆರೆದ ಯುವಕನ ವಿರುದ್ಧ ಪೋಕ್ಸೋ, ಕೊಲೆಯತ್ನ ಪ್ರಕರಣ ದಾಖಲು
0
ನವೆಂಬರ್ 18, 2022
Tags