ತಿರುವನಂತಪುರ: ಶಿಕ್ಷಕರ ನೇಮಕಾತಿ ಅರ್ಹತಾ ಪರೀಕ್ಷೆಯಾದ ಕೆ ಟೆಟ್ ನ ಅರ್ಜಿ ಸಲ್ಲಿಸುವ ದಿನಾಂಕವನ್ನು ನವೆಂಬರ್ 11ರವರೆಗೆ ವಿಸ್ತರಿಸಲಾಗಿದೆ.
ಆದರೆ, ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಕೋರ್ಸ್ ಆಗಿರುವ ಡಿಪೆÇ್ಲಮಾ ಇನ್ ಎಲಿಮೆಂಟರಿ ಎಜುಕೇಶನ್ (ಡಿಎಲ್‍ಡಿ)ಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಒಂದುವರ್ಷ ನಷ್ಟವಾಗುವ ಸ್ಥಿತಿ ನಿರ್ಮಾಣವಾಗಿದೆ.
ಎರಡನೇ ಸೆಮಿಸ್ಟರ್ ಪರೀಕ್ಷೆ ವಿಳಂಬವಾದ ಕಾರಣ ಮೊದಲ ವರ್ಷದ ವಿದ್ಯಾರ್ಥಿಗಳು ಕೆ ಟಿಇಟಿ ಬರೆಯುವ ಅವಕಾಶ ಕಳೆದುಕೊಂಡಿದ್ದಾರೆ. ಕಳೆದ ವರ್ಷದವರೆಗೆ ವಿದ್ಯಾರ್ಥಿಗಳು ಕೋರ್ಸ್ ಮುಗಿಸುವಾಗಲೇ ಎರಡು ಬಾರಿ ಪರೀಕ್ಷೆ ಬರೆಯುವ ಅವಕಾಶವಿತ್ತು. ಈ ವರ್ಷ 2ನೇ ಸೆಮಿಸ್ಟರ್ ಪರೀಕ್ಷೆ ಇದೇ 11ಕ್ಕೆ ಕೊನೆಗೊಳ್ಳಲಿದೆ. ನಂತರ ಅರ್ಜಿಯ ಅಂತಿಮ ದಿನಾಂಕ. 14ರಂದು ಪ್ರಾಯೋಗಿಕ ಪರೀಕ್ಷೆಯೂ ಇದೆ. ಅದರ ನಂತರವೇ, ಅವರು ನಿಯಮಗಳ ಪ್ರಕಾರ ಅರ್ಹರಾಗುತ್ತಾರೆ.
ವಿದ್ಯಾರ್ಥಿಗಳು ಸೆಮಿಸ್ಟರ್ ಅನ್ನು ಸಹ ಪೂರ್ಣಗೊಳಿಸದೆ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಕೋರ್ಸ್ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಕೋವಿಡ್‍ನಿಂದಾಗಿ ಕೋರ್ಸ್‍ನ ವಿಳಂಬವೂ ಹಿನ್ನಡೆಯಾಗಿದೆ. ಅಕ್ಟೋಬರ್ ಮಧ್ಯದಲ್ಲಿ, ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿದಿದೆ ಮತ್ತು ಮೂರನೇ ಸೆಮಿಸ್ಟರ್ ಮುಗಿದಿದೆ. ಈ ಬಾರಿಯ ಎರಡನೇ ಸೆಮಿಸ್ಟರ್ ಪರೀಕ್ಷೆ ಇನ್ನೂ ಮುಗಿದಿಲ್ಲ. ಅವಕಾಶ ಕೈತಪ್ಪಿದರೆ ಮುಂದಿನ ವರ್ಷ ಪಿಎಸ್ ಸಿ ಕರೆಯುವ ಅರ್ಹತಾ ಪರೀಕ್ಷೆ ಬರೆಯಲು ಆಗುವುದಿಲ್ಲ ಎಂಬ ಆತಂಕ ವಿದ್ಯಾರ್ಥಿಗಳದ್ದು. ಈ ಕುರಿತು ವಿದ್ಯಾರ್ಥಿಗಳು ಶಿಕ್ಷಣ ಸಚಿವರು ಹಾಗೂ ¥ರೀಕ್ಷಾ ಭವನಕ್ಕೆ ದೂರು ಸಲ್ಲಿಸಿದ್ದಾರೆ.
ಕೆ.ಟೆಟ್ ಅರ್ಜಿ ಗಡುವು ಒಂದುವಾರ ವಿಸ್ತರಣೆ: ಅವಕಾಶ ವಂಚಿತರಾಗುವ ಆತಂಕದಲ್ಲಿ ಡಿ.ಎಲ್.ಡಿ ವಿದ್ಯಾರ್ಥಿಗಳು; ಕೋವಿಡ್‍ನಿಂದ ಸೆಮಿಸ್ಟರ್ ವಿಳಂಬ
0
ನವೆಂಬರ್ 07, 2022