ಎರ್ನಾಕುಳಂ: ಎರ್ನಾಕುಳಂ ಮಹಾರಾಜ ಕಾಲೇಜು ತಾತ್ಕಾಲಿಕವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಕೆಎಸ್‍ಯು-ಎಸ್‍ಎಫ್‍ಐ ಸಂಘರ್ಷದ ಹಿನ್ನೆಲೆಯಲ್ಲಿ ಕಾಲೇಜು ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಕಾಲೇಜು ಅನಿರ್ದಿಷ್ಟ ಅವಧಿಗೆ ಮುಚ್ಚಲಾಗುವುದು ಎಂದು ಕಾಲೇಜು ಪ್ರಾಂಶುಪಾಲ ವಿ.ಎಸ್.ಜಾಯ್ ತಿಳಿಸಿದ್ದಾರೆ. ಸರ್ವಪಕ್ಷ ಸಭೆ ಕರೆಯಲಾಗುವುದು.
ಸಂಸ್ಕøತ ವಿವಿ ವಿಸಿ ಡಾ. ಎಂ.ವಿ.ನಾರಾಯಣನ್ ಮತ್ತು ಬಾಲಚಂದ್ರನ್ ಚುಳ್ಳಿಕಾಡ್ ಅವರಿಗೆ ನೀಡಬೇಕಿದ್ದ ಸ್ವಾಗತವನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಕಾಲೇಜು ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ಸಿ.ಜಯಚಂದ್ರನ್ ಮಾಹಿತಿ ನೀಡಿದರು.
ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಡೆದ ಜಗಳ ಸಂಘರ್ಷಕ್ಕೆ ಕಾರಣವಾಗಿತ್ತು. ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಕಾಲೇಜು ಬಳಿ ಇರುವ ಜನರಲ್ ಆಸ್ಪತ್ರೆ ಎದುರು ಕೂಡ ಘರ್ಷಣೆ ನಡೆದಿದೆ. ಪೋಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆ.ಎಸ್.ಯು-ಎಸ್.ಎಫ್.ಐ ಸಂಘರ್ಷ: ಎರ್ನಾಕುಳಂ ಮಹಾರಾಜ ಕಾಲೇಜು ಅನಿರ್ದಿಷ್ಟ ಅವಧಿಗೆ ಮುಚ್ಚುಗಡೆ
0
ನವೆಂಬರ್ 03, 2022