ಕಾಸರಗೋಡು: ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ತುರ್ತುಪರಿಸ್ಥಿತಿ ಸಂತ್ರಸ್ತರ ಸಂಘದ ಉಪಾಧ್ಯಕ್ಷ ವಿ.ರವೀಂದ್ರನ್ ಅವರು ಬರೆದಿರುವ 'ತುರ್ತು ಪರಿಸ್ಥಿತಿಯ ಕರಾಳ ದಿನಗಳು'ಪುಸ್ತಕದ ಬಿಡುಗಡೆ ಸಮಾರಂಭ ನ.14ರಂದು ಮಧ್ಯಾಹ್ನ 3 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ಇರುವ ಜೀವಸ್ ಮಾನಸ ಆಡಿಟೋರಿಯಂನಲ್ಲಿ ಜರುಗಲಿದೆ.
ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ ಪುಸ್ತಕ ಬಿಡುಗಡೆಗೊಳಿಸುವರು ಎಂದು ತುರ್ತು ಪರಿಸ್ಥಿತಿ ಸಂತ್ರಸ್ತರ ಸಂಘದ ರಾಜ್ಯ ಉಪಾಧ್ಯಕ್ಷ ವಿ.ರವೀಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಂಸದ ಡಿ.ವಿ.ಸದಾನಂದಗೌಡ ಮೊದಲ ಪ್ರತಿಯನ್ನು ಸ್ವೀಕರಿಸುವರು. ಶಾಸಕ ಸಿ.ಎಚ್.ಕುಞಂಬು, ಬಿಜೆಪಿ ರಾಜ್ಯ ಮಾಜಿ ಸಂಘಟನಾ ಕಾರ್ಯದರ್ಶಿ ಪಿ.ಪಿ.ಮುಕುಂದನ್, ರಾಷ್ಟ್ರೀಯ ಸಮಿತಿ ಸದಸ್ಯ ಕೆ.ರಾಮನ್ ಪಿಳ್ಳ, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರು, ಜನ್ಮಭೂಮಿ ಮಾಜಿ ಪ್ರಧಾನ ಸಂಪಾದಕ ಪಿ. ನಾರಾಯಣನ್, ತುರ್ತು ಪರಿಸ್ಥಿತಿ ಸಂತ್ರಸ್ತರ ಸಂಘದ ರಾಜ್ಯಾಧ್ಯಕ್ಷ ಕೆ. ಶಿವದಾಸನ್, ಪ್ರಧಾನ ಕಾರ್ಯದರ್ಶಿ ಆರ್. ಮೋಹನನ್ ಪಾಲ್ಗೊಳ್ಳುವರು. ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷ ಕೆ.ಎಂ.ಹೇರಳ, ಪ್ರಧಾನ ಸಂಚಾಲಕ ವಕೀಲ ಕೆ.ರಾಜಗೋಪಾಲನ್, ಸಂಚಾಲಕ ಇ.ಕೃಷ್ಣನ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ತುರ್ತು ಪರಿಸ್ಥಿತಿ ಸಂತ್ರಸ್ತರ ಸಂಘದ ಜಿಲ್ಲಾ ಸಮಿತಿ ಕೋಶಾಧಿಕಾರಿ ಮಹಾಬಲ ರೈ ಉಪಸ್ಥಿತರಿದ್ದರು.
ತುರ್ತು ಪರಿಸ್ಥಿತಿಯ ಕರಾಳ ದಿನಗಳು: ನಾಳೆ ಪುಸ್ತಕ ಬಿಡುಗಡೆ
0
ನವೆಂಬರ್ 12, 2022