ತಿರುವನಂತಪುರ: ಮಹಿಳೆಯರ ಸುರಕ್ಷತೆಯನ್ನು ದೊಡ್ಡ ರೀತಿಯಲ್ಲಿ ಪ್ರಶ್ನಿಸಲಾಗುತ್ತಿದೆ. ಡಿಜೆ ಪಾರ್ಟಿಗಳಲ್ಲಿ ಪೋಲೀಸರು ಗಮನಹರಿಸಬೇಕು. ಎಲ್ಲಾ ನಗರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪಿ.
ಸತಿದೇವಿ ಹೇಳಿರುವರು.
ಕೊಚ್ಚಿಯಲ್ಲಿ ಯುವ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಿರುಕುಳಕ್ಕೊಳÀಗಾದ ಮಹಿಳೆ ಪಾನಮತ್ತಳಾಗಿದ್ದಳು ಎಂದು ವರದಿಗಳು ಸೂಚಿಸುತ್ತವೆ. ಮದ್ಯಪಾನವು ಭದ್ರತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಕೊಚ್ಚಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಇತ್ತೀಚಿನ ಉದಾಹರಣೆಯಾಗಿದೆ. ಮಾದಕ ವ್ಯಸನ ಮುಕ್ತ ಕೇರಳದ ಬಗ್ಗೆ ಚರ್ಚಿಸುವಾಗ ಇಂತಹ ಘಟನೆ ನಡೆದಿದೆ. ಯುವತಿಗೆ ಆಗಿರುವಂತಹ ಅನುಭವಗಳು ಸಮಾಜದಲ್ಲಿ ಮತ್ತೆ ಮರುಕಳಿಸದಂತೆ ಜಾಗೃತರಾಗಬೇಕು ಎಂದು ಸತೀದೇವಿ ಹೇಳಿದರು.
ನಗರಗಳಲ್ಲಿ ಮಹಿಳೆಯರು ಒಂಟಿಯಾಗಿ ಓಡಾಡುವಂತಿಲ್ಲ. ಮಹಿಳೆಯರ ಸುರಕ್ಷತೆಗೆ ಪೋಲೀಸರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿರುವರು. ಏತನ್ಮಧ್ಯೆ, ಪ್ರಕರಣದಲ್ಲಿ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಕಾರಿನಲ್ಲಿಯೇ ಅತ್ಯಾಚಾರ ನಡೆದಿರುವುದನ್ನು ಕೊಚ್ಚಿ ಪೆÇಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ. ಕಮಿಷನರ್ ಸಿ.ಎಚ್.ನಾಗರಾಜು ಪ್ರತಿಕ್ರಿಯಿಸಿ, ಡ್ರಗ್ಸ್ ನೀಡಲಾಗಿದೆಯೇ, ಘಟನೆಯಲ್ಲಿ ಷಡ್ಯಂತ್ರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಡಿಜೆ ಪಾರ್ಟಿಗಳು ಅಶ್ಲೀಲತೆಯ ವೇದಿಕೆ: ಮದ್ಯ ಸೇವನೆ ಚಟ ಸುರಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ: ಪಿ.ಸತೀದೇವಿ
0
ನವೆಂಬರ್ 19, 2022