ಕಣ್ಣೂರು: ಕಣ್ಣೂರು ಕೇಮದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮತ್ತೆ ಘರ್ಷÀಣೆ ನಡೆದಿದೆ. ಕಾಪ್ಪ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೈದಿಗಳ ನಡುವೆ ಘರ್ಷಣೆ ನಡೆದಿದೆ.
ಕೈದಿ ಅಮಲ್ ಗಾಯಗೊಂಡಿದ್ದಾನೆ. ಮತ್ತೋರ್ವ ಕಾಪ್ಪ ಕೈದಿ ಸಜನ್ ಥಳಿಸಿದ್ದಾನೆ ಎನ್ನಲಾಗಿದೆ.
ಕಣ್ಣೂರು ಜೈಲಿನಲ್ಲಿ ಕಾಪ್ಪ ಕೈದಿಗಳ ನಡುವೆ ಘರ್ಷಣೆ ನಡೆಯುತ್ತಿರುವುದು ಮೂರು ದಿನಗಳಲ್ಲಿ ಇದು ಎರಡನೇ ಬಾರಿ. ಗುರುವಾರ ಬೆಳಗ್ಗೆ ನಡೆದ ಘರ್ಷಣೆಯಲ್ಲಿ ತ್ರಿಶೂರ್ ಮೂಲದ ಶಫೀಕ್ ಮತ್ತು ಅಂಗಮಾಲಿ ಮೂಲದ ಫೀಜೋ ಗಾಯಗೊಂಡಿದ್ದಾರೆ. ನಂತರ ಇಬ್ಬರನ್ನೂ ಕಣ್ಣೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕಾಪ್ಪ ಕೈದಿಗಳ ನಡುವೆ ಘರ್ಷಣೆ: ಮೂರು ದಿನಗಳಲ್ಲಿ ಎರಡನೇ ಘಟನೆ
0
ನವೆಂಬರ್ 12, 2022