ಕಾಸರಗೋಡು: ಉತ್ತರಾಖಂಡದಲ್ಲಿ ನಡೆಯಲಿರುವ 48ನೇ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿರುವ ಕೇರಳ ತಂಡಕ್ಕೆ ಸಹೋದರರು ಸೇರಿದಂತೆ ಕಾಸರಗೋಡಿನ ಮೂವರು ಯುವ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ.
ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಕೇರಳವನ್ನು ಪ್ರತಿನಿಧಿಸುತ್ತಿರುವ ಕಾಸರಗೋಡಿನ ಜೆರ್ಸಿ ಧರಿಸುವ ಅದೃಷ್ಟ ಕೌಶಿಕ್ ಚೆನ್ನಿಕರ ಮತ್ತು ವೈಭವ ಕೂಡ್ಲು ಅವರಿಗೆ ಲಭಿಸಿದೆ. 17ರಿಂದ 20ರವರೆಗೆ ಚಾಂಪಿಯನ್‍ಷಿಪ್ ನಡೆಯಲಿದೆ. ಜಾಖರ್ಂಡ್‍ನಲ್ಲಿ ನಡೆದ 32ನೇ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡಿನವರಿಗೂ ಕೇರಳ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶ ಲಭ್ಯವಾಗಿದೆ. ಋತ್ವಿಕ್ ಚೆನ್ನಿಕರ ಸಬ್‍ಜೂನಿಯರ್ ತಂಡದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂರೂ ಮಂದಿ ಮಾಜಿ ಅಂತಾರಾಷ್ಟ್ರೀಯ ಆಟಗಾರ ಎನ್.ಐ.ಎಸ್.ಕಬಡ್ಡಿ ಅಕಾಡೆಮಿ ಕೋಚ್ ಜಗದೀಶ್ ಕುಂಬಳೆ ಅವರಲ್ಲಿ ತರಬೇತಿ ಪಡೆದಿದ್ದಾರೆ. ಕೌಶಿಕ್ ಚೆನ್ನಿಕರ ಮತ್ತು ಋತ್ವಿಕ್ ಚೆನ್ನಿಕರ ಅವರು ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್‍ನ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ ಅವರ ಪುತ್ರರು. ವೈಭವ ಕೂಡ್ಲು ಅವರು ಕೂಡ್ಲು ದಯಾನಂದ ಅವರ ಪುತ್ರ.
ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್‍ಗೆ ಕಾಸರಗೋಡಿನ ಪ್ರತಿಭೆಗಳ ಆಯ್ಕೆ
0
ನವೆಂಬರ್ 17, 2022