HEALTH TIPS

ಒಮಿಕ್ರಾನ್​ಗೂ ಮಾರಕ ವೈರಸ್ ಅಲೆ ಸಂಭವ; ಹೆಚ್ಚು ಅಪಾಯಕಾರಿ ತಳಿ ಪತ್ತೆ, ದಕ್ಷಿಣ ಆಫ್ರಿಕಾ ಸಂಶೋಧಕರ ಎಚ್ಚರಿಕೆ

Top Post Ad

Click to join Samarasasudhi Official Whatsapp Group

Qries

 

               ನವದೆಹಲಿ: ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್-19 ಮಹಾಮಾರಿ ಇನ್ನೂ ಸಂಪೂರ್ಣ ವಾಗಿ ಕೊನೆಯಾಗದಿರುವ ಹೊತ್ತಿನಲ್ಲಿ ಕರೊನಾದ ಒಮಿಕ್ರಾನ್ ಪ್ರಭೇದಕ್ಕಿಂತಲೂ ಹೆಚ್ಚು ಅಪಾಯಕಾರಿಯಾದ ತಳಿಯೊಂದು ಪತ್ತೆಯಾಗಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ.

ಮೂರು ವರ್ಷಗಳ ಹಿಂದೆ ದಾಂಗುಡಿಯಿಟ್ಟ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದ ಮನುಕುಲಕ್ಕೆ ದುಃಸ್ವಪ್ನವಾಗಿ ಕಾಡಿತ್ತು. ಬಹುತೇಕ ವಾರಕ್ಕೊಂದು ಎನ್ನುವಂತೆ ಅದರ ಹೊಸ ಹೊಸ ತಳಿಗಳು ಪತ್ತೆಯಾಗಿ ವಿಜ್ಞಾನ ಹಾಗೂ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿತ್ತು.

                  ಇದೀಗ ಅದಕ್ಕಿಂತಲೂ ಅಧಿಕ ಅಪಾಯಕಾರಿಯಾದ ವೈರಸ್ ತಳಿ ಪತ್ತೆಯಾಗಿದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಪತ್ತೆಯಾಗಿರುವ ಹೊಸ ಪ್ರಭೇದವು ಹಾಲಿ ಒಮಿಕ್ರಾನ್ ತಳಿಗಿಂತ ಭೀಕರವಾದ ಅನಾರೋಗ್ಯಕ್ಕೆ ಕಾರಣವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಈ ವೈರಾಣು ರೂಪಾಂತರಗೊಂಡು ತುಲನಾತ್ಮಕವಾಗಿ ಮೃದುವಾದ ಒಮಿಕ್ರಾನ್​ಗಿಂತ ಹೆಚ್ಚು ಅನಾರೋಗ್ಯ ಹಾಗೂ ಸಾವುಗಳಿಗೆ ಕಾರಣವಾಗಬಹುದು ಎಂದು ದಕ್ಷಿಣ ಆಫ್ರಿಕಾದ ತಜ್ಞರು ಎಚ್ಚರಿಸಿದ್ದಾರೆ.

                  ಹೆಚ್ಚು ಅಪಾಯಕಾರಿ: ರೋಗನಿರೋಧಕಶಕ್ತಿ (ಇಮ್ಯುನಿಟಿ) ಕುಂದಿದ ವ್ಯಕ್ತಿಯೊಬ್ಬರಿಂದ ಸಂಗ್ರಹಿಸಲಾದ ಕರೊನಾವೈರಸ್ ಸ್ಯಾಂಪಲ್​ಗಳನ್ನು ಇತ್ತೀಚೆಗೆ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಈ ವೈರಸ್ ಪತ್ತೆಯಾಗಿದೆ. 2021ರಲ್ಲಿ ಎಚ್​ಐವಿ-ಪಾಸಿಟಿವ್ ರೋಗಿಯಿಂದ ಸ್ಯಾಂಪಲ್​ಗಳನ್ನು ಪಡೆದು ಲಸಿಕೆಗಳ ವಿರುದ್ಧ ಒಮಿಕ್ರಾನ್ ಪರೀಕ್ಷೆ ನಡೆಸಿದ್ದ ದಕ್ಷಿಣ ಆಫ್ರಿಕಾದ ಲ್ಯಾಬ್ ತಜ್ಞರೇ ಈ ಪರೀಕ್ಷೆಯನ್ನೂ ನಡೆಸಿದ್ದಾರೆ. ಮೊದಲಿಗೆ ಈ ವೈರಸ್, ಒಮಿಕ್ರಾನ್​ನ ಬಿಎ.1 ಪ್ರಭೇದದಂತೆಯೇ ಸೆಲ್ ಫ್ಯೂಷನ್ ಮತ್ತು ಸಾವಿನ ಪರಿಣಾಮ ತೋರಿತ್ತು. ಆದರೆ, ಅದು ನಂತರದ ಹಂತದಲ್ಲಿ ಚೀನಾದ ವುಹಾನ್​ನಲ್ಲಿ ಪತ್ತೆಯಾದ ಕರೊನಾ ವೈರಸ್​ನ ಮೊದಲ ಆವೃತ್ತಿಯ ರೀತಿಯೇ ವಿಕಾಸಗೊಂಡಿತು ಎಂದು ಸಂಶೋಧಕರು ವಿವರಿಸಿದ್ದಾರೆ.

                  ಜನದಟ್ಟಣೆ ಸ್ಥಳಗಳಲ್ಲಿ ಎಚ್ಚರವಿರಲಿ: ರಾಜ್ಯದಲ್ಲಿ ಹೊಸ ತಳಿಯ ವೈರಾಣು ಪತ್ತೆಯಾಗದ ಕಾರಣ ಆತಂಕಪಡಬೇಕಿಲ್ಲ. ಆದರೂ ಜನದಟ್ಟಣೆ ಸ್ಥಳಗಳಲ್ಲಿ ಆರೋಗ್ಯ ಸಮಸ್ಯೆ ಇರುವವರು (ಕೋ-ಮಾರ್ಬೆಡಿಟಿಸ್) ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಇತ್ಯಾದಿ ಎಚ್ಚರ ವಹಿಸುವುದು ಸೂಕ್ತ ಎನ್ನುತ್ತಾರೆ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries