ಬದಿಯಡ್ಕ: ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ನೇತೃತ್ವದಲ್ಲಿ ಫಿಫಾ ಅಂಡರ್ 17 ವಿಶ್ವ ಕಪ್ ಫುಟ್ ಬಾಲ್ ಕ್ರೀಡೋತ್ಸವದ ಅಂಗವಾಗಿ ಕೇರಳ ಸರ್ಕಾರದ ಮಿಲಿಯನ್ ಗೋಲ್ ಎಂಬ ಕಾರ್ಯಕ್ರಮದ ಕಾಸರಗೋಡು ಬ್ಲಾಕ್ ಮಟ್ಟದ ಉದ್ಘಾಟನೆ ಬದಿಯಡ್ಕ ಪೆರಡಾಲ ನವಜೀವನ ಶಾಲೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಅವರು ನವಜೀವನ ವಿದ್ಯಾರ್ಥಿಗಳಿಗೆ ಕಾಲ್ಚಂಡು ನೀಡುವ ಮೂಲಕ ಉದ್ಘಾಟಿಸಿದರು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯನಿ ಮಿನಿ.ಪಿ ಶುಭಾಶಂಸನೆಗೈದರು. ಶಾಲಾ ಆಡಳಿತ ಅಧಿಕಾರಿ ವೆಂಕಟರಾಜ ಕಬೆಕ್ಕೋಡು ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ದಿವ್ಯಶ್ರೀ ಎನ್.ಎ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಕಾಲ್ಚೆಂಡು ತರಬೇತಿ ಕಾರ್ಯಕ್ರಮ ನವಜೀವನ ಶಾಲೆಯ ಮೈದಾನದಲ್ಲಿ ನಡೆಯುತ್ತಿದೆ.
ನವಜೀವನ ವಿದ್ಯಾಲಯದಲ್ಲಿ ಮಿಲಿಯನ್ ಗೋಲ್ ಗೆ ಚಾಲನೆ
0
ನವೆಂಬರ್ 12, 2022
Tags