ಪೆರ್ಲ: ಅಮಲು ಪದಾರ್ಥಗಳನ್ನು ಉಪಯೋಗಿಸಿ ಮಕ್ಕಳು ಹಾಗೂ ಮನೆಯವರು ದಿಕ್ಕೆಡುತ್ತಿರುವುದರ ವಿರುದ್ಧ ರಾಜ್ಯ ಶಿಕ್ಷಣ ಇಲಾಖೆಯ ನಿರ್ದೇಶನ ಅನುಸಾರ ಬೀದಿಗಿಳಿದು ಜನ ಜಾಗೃತಿ ನಡೆಸಲಾಗುತ್ತಿದೆ. ಇದರ ಅಂಗವಾಗಿ ಶೇಣಿ ಶ್ರೀಶಾರದಾಂಬ ಪ್ರೌಢ ಹಾಗೂ ಹೈಯರ್ ಸೆಕೆಂಡರಿ ವಿಭಾಗ ಜಂಟಿಯಾಗಿ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಮಾನವ ಶೃಂಖಲೆ ರಚಿಸಿ ಗಮನ ಸೆಳೆಯಿತು.
ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್, ಎನ್ನೆಸ್ಸಸ್ಸ್ ಯೋಜನಾಧಿಕಾರಿ ಸಂತೋμï ಪಿಲಾಂಕಟ್ಟೆ, ಶಾಸ್ತಾ ಮಾಸ್ತರ್, ಶಿಕ್ಷಕ ರಕ್ಷಕ ಸಂಘದ ವಿನ್ಸೆಂಟ್ ಡಿ.ಸೋಜ, ಉಮ್ಮರ್ ಕಂಗಿನಮೂಲೆ ಮೊದಲಾದವರು ಭಾಗವಹಿಸಿದ್ದರು.