ಮುಂಬೈ: ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಇಸ್ರೇಲಿ ನಿರ್ದೇಶಕ ನಡವ್ ಲಪಿಡ್ ಹಾಗೂ ಇನ್ನಿತರ ಬುದ್ಧಿಜೀವಿಗಳು ತಮ್ಮ ಸಿನಿಮಾದಲ್ಲಿ
ತೋರಿಸಿರುವುದು ಸುಳ್ಳು ಎಂಬುದನ್ನು ಸಾಬೀತುಪಡಿಸಿದರೆ, ಸಿನಿಮಾ ಮಾಡುವುದನ್ನೇ
ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಐಎಫ್ಎಫ್ಐ ನ ಅಂತಾರಾಷ್ಟ್ರೀಯ ತೀರ್ಪುಗಾರರ ಮುಖ್ಯಸ್ಥರಾಗಿರುವ ಲಪಿಡ್ ಕಾಶ್ಮೀರ ಫೈಲ್ಸ್
ನ್ನು ಅಸಭ್ಯ, ಪ್ರಚಾರ ಪ್ರಿಯ ಚಿತ್ರ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ
ಪ್ರತಿಕ್ರಿಯೆ ನೀಡಿರುವ ಅಗ್ನಿಹೋತ್ರಿ, ಐಎಫ್ಎಫ್ಐ ಜ್ಯೂರಿ ಮುಖ್ಯಸ್ಥನಿಗೆ ಸವಾಲು
ಹಾಕಿದ್ದಾರೆ.
ನಾನು ಬುದ್ಧಿಜೀವಿಗಳು, ನಗರ ನಕ್ಸಲರು ಹಾಗೂ ಇಸ್ರೇಲ್ ನ ಶ್ರೇಷ್ಠ ಸಿನಿಮಾ ನಿರ್ದೇಶಕರಿಗೆ ಸವಾಲು ಹಾಕುತ್ತಿದ್ದೇನೆ, ಕಾಶ್ಮೀರ್ ಫೈಲ್ಸ್ ನ ಯಾವುದೇ ದೃಶ್ಯಗಳು, ಡೈಲಾಗ್, ಸತ್ಯವಲ್ಲದ್ದು ಎಂಬುದನ್ನು ಅವರು ಸಾಬೀತುಪಡಿಸಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ, ನಾನು ಹಿಂದೇಟುಹಾಕುವವನಲ್ಲ ಎಷ್ಟು ಸಾಧ್ಯವಾಗುತ್ತದೋ ಅಷ್ಟೂ ಫತ್ವಾಗಳನ್ನು ಹೊರಡಿಸಿ, ನಾನು ಹೋರಾಡುತ್ತಲೇ ಇರುತ್ತೇನೆ ಎಂದು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.