ಕಾಸರಗೋಡು: ರಸ್ತೆ ಅಂಚಿಗೆ ಹಾಗೂ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಮಕ್ಕಳನ್ನು ಉಪಯೋಗಿಸಿಕೊಂಡು ವಿವಿಧ ವಸ್ತುಗಳ ಮಾರಾಟ ನಡೆಸುವುದನ್ನು ತಡೆಯುವಂತೆ ಮಕ್ಕಳ ಹಕ್ಕು ಆಯೋಗ ಕಟ್ಟುನಿಟ್ಟಿನ ನಿರ್ದೇಶ ನೀಡಿದೆ. ಈ ಬಗ್ಗೆ ಆಯೋಗದ ಅಧ್ಯಕ್ಷ ಕೆ.ವಿ. ಮನೋಜಕುಮಾರ್ ಮತ್ತು ಸದಸ್ಯೆ ಶ್ಯಾಮಲಾದೇವಿ ಆದೇಶ ಹೊರಡಿಸಿದ್ದಾರೆ. ಪಾಲಕರು ತಮ್ಮ ಅಪ್ರಾಪ್ತ ಮಕ್ಕಳನ್ನು ವ್ಯಾಪಾರದಲ್ಲಿ ತೊಡಗಿಸಿಕೊಳ್ಳದಂತೆ ನೋಡಿಕೊಳ್ಳಬೇಖು. ಮಕ್ಕಳ ಸುರಕ್ಷತೆ ಮತ್ತು ಉತ್ತಮ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಪೆÇಲೀಸ್ ಅಧೀಕ್ಷಕರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೂ ನಿರ್ದೇಶ ನೀಡಲಾಗಿದೆ. ಈ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿಯನ್ನು 45 ದಿನಗಳಲ್ಲಿ ನೀಡುವಂತೆಯೂ ಆಯೋಗ ಸೂಚಿಸಿದೆ.
ಟ್ರಾಫಿಕ್ ಸ್ಥಳಗಳಲ್ಲಿ ಎಳೆಯ ಮಕ್ಕಳು ಬಿಸಿಲಿನಲ್ಲಿ ಈ ರೀತಿಯ ವ್ಯಾಪರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇತರ ರಾಜ್ಯ ಕಾರ್ಮಿಕರ ಮಕ್ಕಳು ಇಂತಹ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಮೂಲಭೂತ ಹಕ್ಕಾದ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಅವರ ಸುರಕ್ಷತೆಯನ್ನೂ ಖಾತ್ರಿಪಡಿಸದೆ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿರುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾದ ಅಗತ್ಯವಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಪ್ರತಿಭಟನಾಕಾರರು ಮಕ್ಕಳೊಂದಿಗೆ ಮೆರವಣಿಗೆ ನಡೆಸುವುದೂ ಸರಿಯಲ್ಲ. ಮಕ್ಕಳನ್ನು ಯುದ್ಧದಲ್ಲಿ ಗುರಾಣಿಯಾಗಿ ಬಳಸಿಕೊಳ್ಳುವುದನ್ನೂ ನಿಲ್ಲಿಸಬೇಕು. ಆಯೋಗದ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುದುವುದರ ಜತೆಗೆ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವಂತೆಯೂ ಆಯೋಗ ಸೂಚಿಸಿದೆ.
ಮಕ್ಕಳನ್ನು ಬಳಸಿ ವ್ಯಾಪಾರ: ಕಟ್ಟುನಿಟ್ಟಿನ ಆದೇಶ ನೀಡಿದ ಆಯೋಗ
0
ನವೆಂಬರ್ 05, 2022