ಪೆರ್ಲ: ಕುಂಬಳೆ ಉಪಜಿಲ್ಲಾ ಕ್ರೀಡಾ ಮೇಳವು ಕಾಟುಕುಕ್ಕೆ ಬಾಲಪ್ರಭಾ ಎಯುಪಿ ಶಾಲಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯುವ ಕ್ರೀಡಾ ಮೇಳಕ್ಕೆ ಕುಂಬಳೆ ಉಪಜಿಲ್ಲಾ ನಿಯುಕ್ತ ವಿದ್ಯಾಧಿಕಾರಿ ರಮಾನಾಥ್ ಧ್ವಜಾರೋಹಣಗೈಯುವ ಮೂಲಕ ಚಾಲನೆ ನೀಡಿದರು. ಕುಂಬಳೆ ಉಪಜಿಲ್ಲಾ ಸ್ಪೋಟ್ರ್ಸ್ ಕಾರ್ಯದರ್ಶಿ ಶಶಿಕಾಂತ್ ಬಲ್ಲಾಳ್, ಹೆಚ್.ಎಂ.ಪೋರಂ ಕನ್ವೀನರ್ ವಿಷ್ಣು ಪಾಲ್, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಹರಿಪ್ರಸಾದ್ ರೈ, ಬಾಲಪ್ರಭಾ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.
ಎಲ್.ಪಿ ಹಾಗೂ ಯುಪಿ, ಹೈಸ್ಕೂಲ್, ಹೈಯರ್ ಸೆಕೆಂಡರಿ ವಿಭಾಗದ 89 ಶಾಲೆಗಳಿಂದ 2642 ಮಕ್ಕಳು ಸ್ಪರ್ಧಾರ್ಥಿಗಳಾಗಿ ಭಾಗವಹಿಸುತ್ತಿದ್ದಾರೆ. ಎಲ್ಲರಿಗೂ ಬೆಳಗ್ಗಿನಉಪಹಾರ ಹಾಗೂ ಮಧ್ಯಾಹ್ನದ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ನ.5 ರಂದು ಮಧ್ಯಾಹ್ನ3 ಗಂಟೆಗೆ ಬಹುಮಾನ ವಿತರಣೆ ಜರಗಲಿದೆ.