ನಾವು
ಕೃಷಿಯೆಡೆಗೆ ಎಂಬ ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯ ಭಾಗವಾಗಿ ರಾಜ್ಯದೆಲ್ಲೆಡೆ ಕೃಷಿ
ಆಧಾರಿತ ಯೋಜನೆ ಆರಂಭವಾಗಲಿದೆ. ಕೃಷಿ ಸ್ಥಳದ ಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು
ಬಳಸಿಕೊಳ್ಳುವ ಮೂಲಕ ರೈತರು ತಮ್ಮಆದಾಯವನ್ನು ಹೆಚ್ಚಿಸಿಕೊಳ್ಳುವುದು ಈ ಯೋಜನೆಯ
ಉದ್ದೇಶವಾಗಿದೆ. ನಾವು ಕೃಷಿ ಯೆಡೆಗೆ ಎಂಬ ಯೋಜನೆಯ ಭಾಗವಾಗಿ ರೂಪೀಕರಿಸಲ್ಪಟ್ಟ, ರೈತರು
ಹಾಗೂ ಕೃಷಿ ಗುಂಪುಗಳಿಗೆ ಈ ಯೋಜನೆಯ ಫಲಾನುಭವಿಗಳಾಗಬಹುದು. ಆರಿಸಲ್ಪಡುವ ಜಮೀನಿಗೆ
ಕೃಷಿ ತಜ್ಞರ ಸಹಾಯದಿಂದ ಮೂಲ ಉತ್ಪಾದನೆ ಮತ್ತು ಮಾರುಕಟ್ಟೆ ಯೋಜನೆ ದಾಖಲೆಯನ್ನು
ಸಿದ್ಧಪಡಿಸಿ ನೀಡಲಾಗುತ್ತದೆ. ನಂತರ ಅತ್ಯಂತ ನಿರ್ಣಾಯಕ ಘಟಕಗಳನ್ನು ಬೆಂಬಲಿಸಿ ಆದಾಯದ
ಬೆಳವಣಿಗೆಯನ್ನು ಖಾತರಿ ಪಡಿಸಲಾಗುತ್ತದೆ. ಕೃಷಿ ಭೂಮಿಯಲ್ಲಿ ಸಂಪೂರ್ಣ ತಾಂತ್ರಿಕ
ಸಹಾಯವನ್ನು ಖಾತರಿ ಪಡಿಸಲಾಗುವುದು. ಈ ರೀತಿಯಲ್ಲಿ ಆರಿಸಲ್ಪಟ್ಟ ಯೋಜನಾ ಬದ್ಧವಾದ
ಕೃಷಿ ಆಧಾರಿತ ಕೃಷಿ ಗುಂಪುಗಳನ್ನು, ರೈತ ಉತ್ಪಾದಕ ಗುಂಪುಗಳಾಗಿಯು, ಕಂಪನಿಗಳಾಗಿಯೂ
ಅಪ್‌ಗ್ರೇಡ್ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಹೆಚ್ಚಿನ ವಿವರಗಳಿಗೆ ಕೃಷಿ
ಭವನಗಳನ್ನು ಸಂಪರ್ಕಿಸಬಹುದು.