ತಿರುವನಂತಪುರ: ರಾಜ್ಯ ಸರ್ಕಾರ ಸಿಲ್ವರ್ ಲೈನ್ ಯೋಜನೆಯನ್ನು ಕೈಬಿಟ್ಟಿದೆ ಎಂಬ ಸುದ್ದಿಥಿ ಬೆನ್ನಲ್ಲೇ ಕಾಂಗ್ರೆಸ್ ಅದರ ಯಶಸ್ಸಿನ ಹಕ್ಕು ಚಲಾಯಿಸಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಜನಾಂದೋಲನದ ಮುಂದೆ ಸರ್ಕಾರ ಮಂಡಿಯೂರಿ ಕುಳಿತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ವಾಗ್ದಾಳಿ ನಡೆಸಿದರು. ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬದಿಂದ ಕೋಟಿಗಟ್ಟಲೆ ದೋಚಲು ಈ ಭೂಮಿಯಲ್ಲಿ ಭ್ರಷ್ಟ ರೈಲು ಯೋಜನೆಯನ್ನು ಜಾರಿಗೆ ತರಲು ಬಿಡುವುದಿಲ್ಲ ಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಚ್ಚರಿಸಿತ್ತು. ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿರುವ ಜನಾಂದೋಲನದ ಮುಂದೆ ಪಿಣರಾಯಿ ವಿಜಯನ್ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವದ ವಿಜಯವಾಗಿದೆ. ಪೋಲೀಸರ ಲಾಠಿ ಮತ್ತು ಬೂಟುಗಳ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಶುಭಾಶಯಗಳು ಎಂದು ಕೆ.ಸುಧಾಕರನ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ, ಸಿಲ್ವರ್ ಲೈನ್ ಯೋಜನೆ ವಿರುದ್ಧ ಬಿಜೆಪಿ ಮೊದಲ ಬಾರಿಗೆ ವಾಗ್ದಾಳಿ ನಡೆಸಿತು. ಕೆ-ರೈಲ್ ಯೋಜನೆ ವಿರುದ್ಧ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರು ಜಾಗೃತಿಗೆ ಮುಂದಾದರು. ಯೋಜನೆ ಜಾರಿಯಾಗುವ ಪ್ರದೇಶಗಳ ಜನರೊಂದಿಗೆÀ ಬಿಜೆಪಿ ಹೋರಾಟಕ್ಕೆ ಕೈಜೋಡಿಸಿತ್ತು. ಯೋಜನೆ ಹಗರಣ ಎಂದು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮಾಹಿತಿ ನೀಡಿ ಭ್ರμÁ್ಟಚಾರ ನಿಯಂತ್ರಣಕ್ಕೆ ನಾಂದಿ ಹಾಡಿದ್ದು ಬಿಜೆಪಿಯೇ ಎಂದು ಬಿಜೆಪಿ ತಿಳಿಸಿದೆ.
ಸಿಲ್ವರ್ ಲೈನ್ ಕೇರಳದಲ್ಲಿ ಜಾರಿಯಾಗುವುದಿಲ್ಲ ಎಂದು ಬಿಜೆಪಿ ಮೊದಲಿನಿಂದಲೂ ಹೇಳುತ್ತಿದೆ. ಕೇಂದ್ರ ಸಚಿವ ವಿ.ಮುರಳೀಧರನ್ ಮತ್ತಿತರರು ಮನೆಮನೆಗೆ ತೆರಳಿ ಕೆ-ರೈಲು ಯೋಜನೆಯ ಸಮಸ್ಯೆಗಳನ್ನು ಜನರ ಮುಂದೆ ವಿವರಿಸಿದರು. ಬಿಜೆಪಿ ಯೋಜನೆ ವಿರುದ್ಧ ಕೈಗೊಂಡ ನೀತಿಯ ಯಶಸ್ಸಿನಿಂದಲೇ ಸರ್ಕಾರ ಹಿಂದೆ ಸರಿಯಬೇಕಾಯಿತು ಎಂದು ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿಕೆ ನೀಡಿರುವರು. ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡದ ಕಾರಣ ಪಿಣರಾಯಿ ಸರ್ಕಾರ ಯೋಜನೆಯನ್ನು ಜಾರಿಗೊಳಿಸಲಾಗದೆ ಹಿಂದೆಸರಿದಿದೆ. ಹಲವು ಬಾರಿ ಚರ್ಚೆ ನಡೆಸಿದರೂ ಕೇಂದ್ರ ಸರಕಾರ ಯೋಜನೆಗೆ ಹಸಿರು ನಿಶಾನೆ ತೋರಲು ಮುಂದಾಗಿಲ್ಲ.
ರೈಲು ಯೋಜನೆ ಅನುಷ್ಠಾನಕ್ಕೆ ಎದುರಾಗಿ ನಡೆಸಿದ ಹೋರಾಟದ ಫಲಶ್ರುತಿ: ಕಾಂಗ್ರೆಸ್ ನಿಂದಾಗಿ ಸಿಲ್ವರ್ ಲೈನ್ ಯೋಜನೆ ಹಿಂದೆಸರಿದಿದೆ: ಕೆ.ಸುಧಾಕರನ್ ವಾಗ್ದಾಳಿ
0
ನವೆಂಬರ್ 19, 2022