ಕಾಸರಗೋಡು: ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಘಟಕ ಹಾಗೂ ಕಾಸರಗೋಡು ನಗರಸಭೆ ವತಿಯಿಂದ ಪಿಲಿಕುಂಜೆ ಸಂಧ್ಯಾರಾಗ ತೆರೆದ ಸಭಾಂಗಣದಲ್ಲಿ ವಿಶ್ವಕಪ್ ಫುಟ್‍ಬಾಲ್ ಪಂದ್ಯವನ್ನು ವೀಕ್ಷಿಸಲು ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ.
ದೊಡ್ಡ ಪರದೆಯಲ್ಲಿ ನೇರಪ್ರಸಾರ ವೀಕ್ಷಿಸಲು ಪ್ರತಿದಿನ ಸಾವಿರಾರು ಜನರು ಸಂಧ್ಯಾರಾಗಂ ತೆರೆದ ಸಭಾಂಗಣಕ್ಕೆ ಆಗಮಿಸುತ್ತಿದ್ದಾರೆ. ಎಲ್ಲಾ ನಾಲ್ಕು ಪಂದ್ಯಗಳನ್ನು ಪ್ರತಿದಿನ ತೋರಿಸಲಾಗಿದ್ದರೂ, ಸಂಜೆ 6.30 ಮತ್ತು ರಾತ್ರಿ 9.30ರ ಪಂದ್ಯಗಳ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಫುಟ್ಬಾಲ್ ಪ್ರೇಮಿಗಳು ಇಲ್ಲಿ ಬಂದು ಸೇರುತ್ತಾರೆ. ಬೃಹತ್ ಪರದೆಯಲ್ಲಿ ಫುಟಬಾಲ್ ಪಂದ್ಯಾಟ ವೀಕ್ಷಿಸಲು ಜಿಲ್ಲೆಯ ವಿವಿಧೆಡೆಯಿಂದ ಜನರು ಆಗಮಿಸುತ್ತಾರೆ. 432 ಚದರವಿಶಾಲವಾದ ಪಿಕ್ಸೆಲ್ 3ಎಚ್.ಡಿ.ಎಲ್‍ಇಡಿ ಗೋಡೆಯ ಮೇಲೆ ಪಂದ್ಯಾಟಗಳ ನೇರ ಪ್ರಸಾರ ನಡೆಸಲಾಗುತ್ತಿದೆ.
ಬೃಹತ್ ತೆರೆಯಲ್ಲಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದಲ್ಲಿ, ಪಂದ್ಯವನ್ನು ಮೈದಾನದಲ್ಲಿ ಕುಳಿತು ವೀಕ್ಷಿಸುವ ಅನುಭವವುಂಟಾಗುತ್ತದೆ ಎನ್ನುತ್ತಾರೆ ಪ್ರೇಕ್ಷಕರು. ಪೆÇೀರ್ಚುಗಲ್-ಘಾನಾ ಪಂದ್ಯವನ್ನು ವೀಕ್ಷಿಸಲು ಅತಿ ಹೆಚ್ಚು ಪ್ರೇಕ್ಷಕರು ಆಗಮಿಸಿದ್ದು, ಐದು ಸಾವಿರಕ್ಕೂ ಹೆಚ್ಚಿನ ಫುಟ್ಬಾಲ್ ಪ್ರೇಮಿಗಳು ಪಂದ್ಯಾಟ ವೀಕ್ಷಣೆಗೆ ಆಗಮಿಸಿದ್ದರು. ಇಲ್ಲಿಯೂ ವಿವಿಧ ತಂಡಗಳ ಅಭಿಮಾನಿಗಳ ಜಯಘೋಷ ಸಂಭ್ರಮವನ್ನು ಹೆಚ್ಚಿಸಿದೆ. ರಾತ್ರಿ 12.30ರ ಪಂದ್ಯ ವೀಕ್ಷಿಸಲು ಕೆಲವರು ಕಂಬಳಿ, ದಿಂಬುಗಳೊಂದಿಗೆ ಆಗಮಿಸುತ್ತಾರೆ. ಅನೇಕರು ಹತ್ತಿರದ ಮರವನ್ನು ಏರುವ ಮೂಲಕ ಪ್ರಮುಖ ತಂಡದ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಒಟ್ಟಿನಲ್ಲಿ ಸಂಧ್ಯಾರಾಗಂ ತೆರೆದ ಸಭಾಂಗಣ ಫುಟ್ಬಾಲ್ ವೀಕ್ಷಣೆಯ ನೆಚ್ಚಿನ ತಾಣವಾಗಿ ಬದಲಾಗಿದೆ.
ಬೃಹತ್ ಪರದೆಯಲ್ಲಿ ಫುಟ್ಬಾಲ್ ವೀಕ್ಷಣೆಗೆ ಅವಕಾಶ: ಕಾಸರಗೋಡು ಸಂಧ್ಯಾರಾಗಂ ಸಭಾಂಗಣದಲ್ಲಿ ಜನದಟ್ಟಣೆ
0
ನವೆಂಬರ್ 28, 2022