ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನೀರ್ಚಾಲು ಘಟಕದ ರಜತ ಮಹೋತ್ಸವ ಹಾಗೂ ಮರ್ಚೆಂಟ್ಸ್ ವೆಲ್‍ಫೇರ್ ಸೊಸೈಟಿಯ ವಾರ್ಷಿಕ ಮಹಾಸಭೆ ನ.16 ಬುಧವಾರ ನೀರ್ಚಾಲು ವ್ಯಾಪಾರ ಭವನದಲ್ಲಿ ನಡೆಯಲಿದೆ.
ನೀರ್ಚಾಲು ಘಟಕದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕ ಮಹಾಸಭೆಯನ್ನು ಜಿಲ್ಲಾ ಅಧ್ಯಕ್ಷ ಕೆ.ಅಹಮ್ಮದ್ ಶರೀಫ್ ಉದ್ಘಾಟಿಸುವರು. ನೀರ್ಚಾಲು ಘಟಕದ ಪ್ರಧಾನ ಕಾರ್ಯದರ್ಶಿ ರವಿ ನೀರ್ಚಾಲು ವರದಿ, ಖಜಾಂಜಿ ಪ್ರಶಾಂತ್ ಪೈ ಲೆಕ್ಕಪತ್ರ ಮಂಡಿಸುವರು. ಬಳಿಕ ಜಿಲ್ಲಾ ಸಮಿತಿ ಸದಸ್ಯರಿಗೆ, ಹಿರಿಯ ವ್ಯಾಪಾರಿಗಳಿಗೆ ಸನ್ಮಾನ, ಸದಸ್ಯರ ಮಕ್ಕಳಲ್ಲಿ ಹತ್ತನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರಿಗೆ ಅಭಿನಂದನೆ ನಡೆಯಲಿದೆ. ಅನೇಕ ವರ್ಷಗಳಿಂದ ಕಚೇರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಿರಿಯರಾದ ನಾರಾಯಣ ಶೆಟ್ಟಿ ಬೇಳ ಅವರಿಗೆ ಬೀಳ್ಕೊಡುಗೆ ನಡೆಯಲಿದೆ. ಜಿಲ್ಲಾ ಕಾರ್ಯದರ್ಶಿ ಕೆ.ಜೆ.ಸಜಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ವತ್ಸ, ರಾಜ್ಯ ಕೌನ್ಸಿಲರ್ ಕುಂಜಾರು ಮುಹಮ್ಮದ್ ಹಾಜಿ ಶುಭಾಶಂಸನೆಗೈಯ್ಯುವರು. ಮಧ್ಯಾಹ್ನ 12 ಗಂಟೆಯಿಂದ ಕುಟುಂಬ ಮತ್ತು ವ್ಯಾಪಾರ ಎಂಬ ವಿಚಾರದಲ್ಲಿ ಗಂಗಾಧರ ಎಂ.ಕೆ. ವಿಚಾರ ಸಂಕಿರಣ ನಡೆಸಿಕೊಡುವರು. ಭೋಜನದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗಲಿದೆ. ಮಹಾಸಭೆಯ ದಿನದಂದು ಮಧ್ಯಾಹ್ನ 3 ಗಂಟೆಯ ತನಕ ನೀರ್ಚಾಲು ಘಟಕದ ಎಲ್ಲಾ ವ್ಯಾಪಾರ ಸಂಸ್ಥೆಗಳಿಗೂ ರಜೆಯಾಗಿದ್ದು, ಸಭೆಯಲ್ಲಿ ಪಾಲ್ಗೊಂಡ ಸದಸ್ಯರಿಗೆ ರಜತ ಮಹೋತ್ಸವ ಉಡುಗೊರೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಳೆ ನೀರ್ಚಾಲು ವ್ಯಾಪಾರಿ ಘಟಕದ ರಜತ ಮಹೋತ್ಸವ: ಮಹಾಸಭೆ
0
ನವೆಂಬರ್ 14, 2022