ಕಾಸರಗೋಡು: ಉತ್ತರ ಕೇರಳದ ಆಧ್ಯಾತ್ಮಿಕ ಕೇಂದ್ರವಾದ ಆಲಂಪಾಡಿ ನಾಲ್ಕನೇಮೈಲಿಗಲ್ಲು ಸನಿಹದ ಮಡವೋರ್ ಕೋಟೆಯಲ್ಲಿ ಶೇಖ್ ಜೀಲಾನಿ ದಿನಾಚರಣೆಯ ಅಂಗವಾಗಿ ಮಾನವ ಮಹಾ ಸಂಗಮ ಕಾರ್ಯಕ್ರಮದೊಂದಿಗೆ ಮಡವೂರ್‍ಕೋಟೆಯ 34ನೇ ವಾರ್ಷಿಕ ಸಮಾರಂಭ ನ. 26ಮತ್ತು 27ರಂದು ಜರುಗಲಿರುವುದಾಗಿ ಸೈಯದ್ ಯಹ್ಯಾ ಬುಖಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೈಯದ್ ಯಹ್ಯಾ ಬುಖಾರಿ ಅವರ ನೇತೃದಲ್ಲಿ ಕಾರ್ಯಕ್ರಮ ನಡೆಯಲಿದೆ. ಶೇಖ್ ಜೀಲಾನಿ ದಿನಾಚರಣೆಯ ನಿಮಿತ್ತ ಮಾನವ ಮಹಾ ಸಂಗಮ, ಅಬೂಬಕ್ಕರ್ ವಲಿಯುಲ್ಲಾಹಿಅವರಿಗೆ ವಹಿಸಿಕೊಟ್ಟ ಪ್ರಕಾರ ತರೀಕತುಲ್ ಖಾದಿರಿಯಾ ಅವರ ಧಿಕ್ರ್ ಹಲ್ಕಾ ವಾರ್ಷಿಕ ಸಮ್ಮೇಳನ ಮತ್ತು ಅವರ ತಂದೆ ಶಾದುಲಿಯಾ ತಾರೀಕಮ್ ಗೌರವಾನ್ವಿತ ಖಿಲಾಫತ್ ವಾಹಕರೂ ಆದ ಸೈಯದ್ ಮುಹಮ್ಮದ್ ಬುಹಾರಿ ಕೋಯಮ್ಮ ತಙಳ್ ಅವರ ಆಂಡ್ ನೇರ್ಚೆ ಸಮಾರಂಭ, ಸೂಫಿ ಸಂತರು, ಧಾರ್ಮಿಕ ಪ್ರವಚನಕಾರರು ಮತ್ತು ಮಹಾನ್ ಜನ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಅಧ್ವಾತ್ಮಿಕ ಸಂಗಮ ನಡೆಯಲಿರುವುದು. 26ರಂದು ಆಧ್ಯಾತ್ಮ ಸಂಗಮ, ಶಾದುಲಿ ರಾತೀಬ್, ಸಾಮೂಹಿಕ ಪ್ರಾರ್ಥನೆ ನಡೆಯುವುದು. 27ರಂದು ನಡೆಯುವ ಸಾಂಸ್ಕ್ರತಿಕ ಸಂಗಮ ಕಾರ್ಯಕ್ರಮವನ್ನು ಕೇಂದ್ರ ಹಜ್ ಸಮಿತಿ ಅಧ್ಯಕ್ಷ ಎ.ಪಿ ಅಬ್ದುಲ್ಲಕುಟ್ಟಿ ಉದ್ಘಾಟಿಸುವರು. ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಫಾದರ್ ಮ್ಯಾಥ್ಯೂ ಬೇಬಿ, ಕೊಪ್ಪಲ್ ಚಂದ್ರಶೇಖರನ್, ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಐಎನ್ನೆಲ್‍ನ ಅಸೀಸ್ ಕಡಪ್ಪುರ, ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್, ಶ್ರುತಿವಾರಿಜಾಕ್ಷನ್ ಪಾಳ್ಗೊಳ್ಳುವರು.
'ಮಾತಿನಿಂದಲ್ಲ, ಬದುಕಿನಿಂದ ನಾವು ಇತರರಿಗೆ ಮಾದರಿಯಾಗಬೇಕು' ಎಂಬ ಮಡವೂರ್‍ಕೋಟ ಅವರ ಸಿದ್ಧಾಂತದನ್ವಯ ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದಆಧ್ಯಾತ್ಮಿಕ ಶಾಂತಿಗಾಗಿ ಅನೇಕ ಜನರು ಇಲ್ಲಿಗೆ ಬರುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೈಯದ್ ಯಹ್ಯಾ ಬುಖಾರಿ ತಙಳ್, ಸೈಯದ್ ಇಬ್ರಾಹಿಂ ತಙಳ್, ಸೈಯದ್ ನೂರುದ್ದೀನ್ ಶರಫ್, ಜುಬೈರ್ ಮೌಲವಿ, ಅಬ್ದುಲ್ ಗಫೂರ್, ತಾಜುದ್ದೀನ್ ಉಪಸ್ಥಿತರಿದ್ದರು.
ನಾಳೆಯಿಂದ ಮಡವೂರ್ ಕೋಟದಲ್ಲಿ ಶೇಖ್ ಜೀಲಾನಿ ವಾರ್ಷಿಕ, ಮಾನವ ಮಹಾ ಸಂಗಮ
0
ನವೆಂಬರ್ 24, 2022
Tags