ಬದಿಯಡ್ಕ: ಸವಾಲುಗಳನ್ನು ದಿಟ್ಟವಾಗಿ ಎದುರಿಸಿದಾಗ ನಾವು ವಿಜಯಿಯಾಗಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟ ಸಾಧಕರನ್ನು ಗೌರವಿಸುವ ಮೂಲಕ ಮಾದರಿ ಕಾರ್ಯಕ್ರಮ ನಡೆದಿದೆ. ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ದೃಢಸಂಕಲ್ಪವಿರಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಎಡನೀರು ಮಠದಲ್ಲಿ ಶುಕ್ರವಾರ ಜರಗಿದ ಸ್ವಾವಲಂಬಿ ಭಾರತ ಅಭಿಯಾನದ ಕಾಸರಗೋಡು ಜಿಲ್ಲಾ ಸಮಿತಿಯ ಏಕದಿನ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಮುಖಂಡ ವಕೀಲ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯಕಾರಿ ಸದಸ್ಯ ಲೋಕೇಶ್ ಜೋಡುಕಲ್ಲು ಮಾತನಾಡಿ ನಮ್ಮ ಸಾಮಥ್ರ್ಯಕ್ಕನುಗುಣವಾಗಿ ಮುಂದುವರಿಯಬೇಕು. ಕಷ್ಟಗಳು ಬಂದರೆ ಅದನ್ನು ಎದುರಿಸುವ ಶಕ್ತಿಯನ್ನು ನೀಡು ಎಂದು ಭಗವಂತನಲ್ಲಿ ಕೇಳಿಕೊಳ್ಳುವ ಮನೋಭಾವ ನಮ್ಮದಾಗಿದ್ದರೆ ಆತನಿಗೆ ಯಾವುದೇ ಕಾರ್ಯದಲ್ಲಿ ಸಾಧÀನೆಗೈಯಲು ಸಾಧ್ಯವಿದೆ. ಕತ್ತಲೆಯ ಮಧ್ಯೆ ಸಣ್ಣ ದೀಪವೊಂದನ್ನು ಉರಿಸುವ ಪ್ರಯತ್ನವನ್ನು ಮಾಡಬೇಕು. ನಾಡಿನ ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಕೈಯಲ್ಲಿ ಕಸವನ್ನು ಹಿಡಿದು ಕಸದ ಬುಟ್ಟಿ ಎಲ್ಲಿದೆ ಎಂದು ಕೇಳುವ ಮನೋಭಾವ ನಾಡಿನ ಜನತೆಯಲ್ಲಿಮೂಡಿಬಂದ ಕಾಲವಿದಾಗಿದೆ. ಬದಲಾವಣೆಯ ಹಾದಿಯಲ್ಲಿ ಜಯಗಳಿಸಿದಾಗ ಭಾರತ ವಿಶ್ವಗುರುವಾಗಬಲ್ಲದು ಎಂದರು.
ಇದೇ ಸಂದರ್ಭದಲ್ಲಿ ಸ್ವ ಉದ್ಯೋಗದಲ್ಲಿ ಬದುಕನ್ನು ಕಟ್ಟಿಕೊಂಡು ಅನೇಕರಿಗೆ ಕೆಲಸವನ್ನೂ ನೀಡುತ್ತಿರುವ 9 ಮಂದಿ ಸಾಧಕರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಡಾ. ನಾಗರತ್ನ ಹೆಗಡೆ, ರಜಿ ಶನೋಜ್, ಸುಧೀೀಶ್ ನಾರಾಯಣ, ಬಿಂದು ದಾಸ್, ಕಮಲೇಶ್ ಪೈಕ್ಕ, ಪ್ರಕಾಶನ್ ಕುಂಬಲಂಪಳ್ಳಿ, ಸತೀಶ್ ಎಡನೀರು, ಬಿಂದಿಯಾ ಬೇಳ, ಕೆ.ಪಿ.ಮುರಳೀಕೃಷ್ಣ ಕೋಟೂರು ತಮ್ಮ ಸಾಧನೆಯ ಮೂಲಕ ಗೌರವಕ್ಕೆ ಪಾತ್ರರಾದರು. ಸುನಿಲ್ ಪಿ.ಆರ್., ಪ್ರಶಾಂತ್ ಉಬ್ರಂಗಳ ನಿರೂಪಿಸಿದರು. ಜಿಲ್ಲಾ ಸಹಸಂಚಾಲಕ ಮಣಿಕಂಠ ರೈ ಸ್ವಾಗತಿಸಿ, ಚಿಂದುರಾಜ್ ವಂದಿಸಿದರು.
ಸ್ವಾವಲಂಬಿ ಭಾರತ ಅಭಿಯಾನದ ಏಕದಿನ ಕಾರ್ಯಾಗಾರದ ಸಮಾರೋಪ: ಜನರಿಗೆ ಬದುಕನ್ನು ಕಟ್ಟಲು ನೆರವಾದ ಸಾಧಕರಿಗೆ ಸನ್ಮಾನ
0
ನವೆಂಬರ್ 26, 2022