ಮೊರ್ಬಿ: ಗುಜರಾತ್ನ ಮೊರ್ಬಿಯಲ್ಲಿ ನಡೆದ ಸೇತವೆ ಕುಸಿತದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು.
ಅಗತ್ಯವಿದ್ದಲ್ಲಿ ಗ್ರೀಸಿಂಗ್ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ. ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು.
'ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್, ಈ ದುರ್ಘಟನೆಯನ್ನು 'ಆಯಕ್ಟ್ ಆಫ್ ಗಾಡ್' ಎಂದು ಕರೆದಿದ್ದಾರೆ' ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಈ ಮಾಹಿತಿಯನ್ನು ನೀಡಿದ್ದಾರೆ. ಒವೆರಾ ಕಂಪನಿಯ ಇಬ್ಬರು ಮ್ಯಾನೇಜರ್ರನ್ನು ಬಂಧಿಸಲಾಗಿತ್ತು. ಅವರಲ್ಲಿ ಒಬ್ಬರು ಈ ಹೇಳಿಕೆಯನ್ನು ನೀಡಿದ್ದಾರೆ.
ಪೊಲೀಸ್ ಕಸ್ಟಡಿಗೆ ಕಳುಹಿಸಲಾದ ಆರೋಪಿಗಳ ವಿವರವನ್ನು ಕೇಳಿದಾಗ ವಕೀಲ ಪಾಂಚಾಲ್, 'ಬಂಧಿತರಲ್ಲಿ ಇಬ್ಬರು ಒರೆವಾ ಕಂಪನಿಯಲ್ಲಿ ಮ್ಯಾನೇಜರ್‌ಗಳು. ಇನ್ನಿಬ್ಬರು ಸೇತುವೆಯ ಫ್ಯಾಬ್ರಿಕೇಶನ್ ಕೆಲಸ ಮಾಡಿದವರು. ಉಳಿದ ಐವರು ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿಗಳಾಗಿದ್ದರು' ಎಂದರು.