ಕಾರಡ್ಕ: ಕಾರಡ್ಕ ಕಾಡಾನೆ ಸಂರಕ್ಷಣಾ ಯೋಜನೆ ಕುರಿತು ಪರಿಶೀಲನಾ ಸಭೆ ನಡೆಯಿತು. ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು.
ಬಳ್ಳಕ್ಕಾನದಿಂದ ಚಾಮೆಕೊಚ್ಚಿವರೆಗಿನ ಎಂಟು ಮೀಟರ್ ಸೋಲಾರ್ ತೂಗು ಬೇಲಿಯ ಕಾಮಗಾರಿಯನ್ನು ನವೆಂಬರ್ 20ರೊಳಗೆ ಪೂರ್ಣಗೊಳಿಸಿ ಕಾರ್ಯಪ್ರವೃತ್ತಗೊಳಿಸಲಾಗುವುದು. ಎರಡನೇ ಹಂತದ ಕಾಮಗಾರಿಯ ಭಾಗವಾಗಿ ಬಳ್ಳಕ್ಕಾನದಿಂದ ತಲ್ಪಚ್ಚೇರಿವರೆಗಿನ 4 ಕಿ.ಮೀ ಹಾಗೂ ಪರಪ್ಪದಿಂದ ಬೆಳ್ಳಿಪ್ಪಾಡಿವರೆಗಿನ 5 ಕಿ.ಮೀ ಉದ್ದದ ಕಾಮಗಾರಿಯನ್ನು ಡಿಸೆಂಬರ್ ಮೊದಲ ವಾರದಲ್ಲಿ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಪಂಚಾಯಿತಿ, ಕಾರಡ್ಕ ಬ್ಲಾಕ್ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಸೌರಶಕ್ತಿ ತೂಗು ಬೇಲಿ ಯೋಜನೆಗೆ ಒಂದು ಕೋಟಿ ರೂ. ವಿನಿಯೋಗಿಸಲಾಗುತ್ತದೆ. ಯೋಜನೆಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಮೊತ್ತವನ್ನು ನೀಡುವಂತೆ ಒತ್ತಾಯಿಸಲು ಸಭೆ ನಿರ್ಧರಿಸಿತು. ಸೋಲಾರ್ ಬೇಲಿ ನಿರ್ಮಾಣ ಕಾಮಗಾರಿಯನ್ನು ಈ ವರ್ಷವೇ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲು ಸಭೆ ನಿರ್ಧರಿಸಿದೆ. 29 ಕಿ.ಮೀ ಬೇಲಿಯನ್ನು 21 ಕಿ.ಮೀ.ಗೆ ಪರಿಷ್ಕರಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಡಿಎಫ್ ಒ ಪಿ.ಬಿಜು, ಮುಳಿಯಾರ್ ಪಂಚಾಯತಿ ಅಧ್ಯಕ್ಷೆ ಪಿ.ವಿ.ಮಿನಿ, ದೇಲಂಪಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ದುಲ್ಲ ಕುಂಞÂ್ಞ, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕೆ.ರಮಣಿ, ಸ್ಥಾಯಿ ಸಮಿತಿ ಸದಸ್ಯರಾದ ವಿ.ಕೆ.ನಾರಾಯಣನ್, ಪಿ.ಸವಿತಾ, ಕೆ.ನಾಸರ್, ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಡಿ.ರಾಜು ಮತ್ತು ಪೋಲೀಸ್ ಕನ್‍ಸ್ಟ್ರಕ್ಷನ್ ಕಾರ್ಪೋರೇಷನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಮ್ಜಾ ಸಭೆಯಲ್ಲಿ ಭಾಗವಹಿಸಿದ್ದರು.
ಆನೆ ಸಂರಕ್ಷಣಾ ಯೋಜನೆ: ಪರಿಶೀಲನಾ ಸಭೆ
0
ನವೆಂಬರ್ 09, 2022
Tags