ಕಾಸರಗೋಡು: ರಾಷ್ಟ್ರೀಯ ಮಾಧ್ಯಮ ದಿನಾಚರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾಸರಗೋಡಿನ ಜಿಲ್ಲಾ ಮಾಹಿತಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮ ಕಾರ್ಯಕರ್ತರಿಗೆ ಭಾಷಣ ಸ್ಪರ್ಧೆ ಮತ್ತು ಮಾಧ್ಯಮ ವಿದ್ಯಾರ್ಥಿಗಳಿಗೆ ಸುದ್ದಿ ಬರವಣಿಗೆ ಸ್ಪರ್ಧೆಯನ್ನು ನಡೆಸಲಾಯಿತು.
ಮಾಧ್ಯಮ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಶಫೀಕ್ ನಸ್ರುಲ್ಲಾ (ಮೀಡಿಯಾ ಒನ್) ಪ್ರಥಮ ಸ್ಥಾನ ಗಳಿಸಿದರು. ಫಜಲು ರೆಹಮಾನ್ (ಚಂದ್ರಿಕಾ) ಮತ್ತು ಜಿ.ಎನ್.ಪ್ರದೀಪ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಮಡರು. ವಿಜೇತರಿಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಬಹುಮಾನ ವಿತರಿಸಿದರು. ಸಹಾಯಕ ಜಿಲ್ಲಾಧಿಕಾರಿ ಡಾ.ಮಿಥುನ್ ಪ್ರೇಮರಾಜ್ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ಎಂ.ಶಿವಪ್ರಕಾಶನ ನಾಯರ್, ಪ್ರೆಸ್ ಕ್ಲಬ್ ಅಧ್ಯಕ್ಷ ಮುಹಮ್ಮದ್ ಹಾಶಿಂ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ಸಿಡಿಇ ಹಿರಿಯ ಅಧೀಕ್ಷಕ ಎಂ.ಸಲೀಂ ಹಾಗೂ ಸತೀಶ ಪೆÇಯ್ಯಕೋಡ್ ಜಿಲ್ಲಾ ಮಾಹಿತಿ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಮಾಧ್ಯಮ ದಿನಾಚರಣೆ: ಮಾಧ್ಯಮ ಕಾರ್ಯಕರ್ತರಿಗೆ ವಿವಿಧ ಸ್ಪರ್ಧೆಗಳು
0
ನವೆಂಬರ್ 16, 2022
Tags