ಎರ್ನಾಕುಳಂ: ದೇಶವಿರೋಧಿ ಕೃತ್ಯಗಳ ಹಿನ್ನೆಲೆಯಲ್ಲಿ ಬಂಧಿತನಾಗಿ, ತೃಶ್ಯೂರ್ ಜಿಲ್ಲೆಯ ವಿಯ್ಯೂರ್ ಕೇಂದ್ರ ಕಾರಾಗೃಹದಲ್ಲಿ ಕಳೆಯುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಿ.ಎಚ್.ಸೈನುದ್ದೀನ್‍ಗೆ ಸಿಮ್ ಕಾರ್ಡು ತಲುಪಿಸಿದ ಸೈನುದ್ದೀನ್ ಪತ್ನಿ ಸೇರಿದಂತೆ ಮೂವರ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗಿದೆ.
ಸೈನುದೀನ್ ಪತ್ನಿ ನದಿರಾ, ತಂದೆ ಮಹಮ್ಮದ್ ನಾಸಿರ್ ಹಾಗೂ ಪುತ್ರನ ವಿರುದ್ಧ ಈ ಕೇಸು ದಾಖಲಾಗಿದೆ. ಜೈಲು ಅಧೀಕ್ಷಕರ ದೂರಿನ ಮೇರಗೆ ವಿಯೂರ್ ಠಾಣೆ ಪೊಲೀಸರು ಈ ಕೇಸು ದಾಖಲಿಸಿಕೊಂಡಿದ್ದಾರೆ. ದೇಶವಿರೋಧಿ ಕೃತ್ಯಗಳಿಗೆ ಸಂಬಂಧಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪಿಎಫ್‍ಐ ಕೋಟ್ಟಾಯಂ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೈನುದ್ದೀನ್‍ನನ್ನು ಎನ್.ಐ.ಎ ಇತ್ತೀಚೆಗೆ ಬಂಧಿಸಿ ವಿಯೂರ್ ಕೇಂದ್ರ ಕಾರಾಗೃಹದಲ್ಲಿರಿಸಿತ್ತು. ಹೆಚ್ಚಿನ ಸುರಕ್ಷಾ ವ್ಯವಸ್ಥೆಯಿರುವ ವಿಯೂರ್ ಕೇಂದ್ರ ಕಾರಾಗೃಹಕ್ಕೆ ಈ ಮೂವರು ಧಾರ್ಮಿಕ ಗ್ರಂಥದ ಮರೆಯಲ್ಲಿ ಈ ಸಿಮ್ ಕಾರ್ಡನ್ನು ಇರಿಸಿ ರವಾನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅ. 31ರಂದು ಘಟನೆ ನಡೆದಿದೆ. ಧಾರ್ಮಿಕ ಗ್ರಂಥವನ್ನು ಸಮಗ್ರ ತಪಾಸಣೆ ನಡೆಸುವ ಮಧ್ಯೆ ಸಿಮ್‍ಕಾರ್ಡು ಪತ್ತೆಯಾಗಿತ್ತು. ಸಿಮ್ ಕಾರ್ಡು ಪೂರೈಕೆ ಕಾರ್ಯ ಯಶಸ್ವಿಯದಲ್ಲಿ, ಮುಂದೆ ಮೊಬೈಲ್ ತಲುಪಿಸುವ ಸಂಚನ್ನು ತಂಡ ನಡೆಸಿತ್ತೆನ್ನಲಾಗಿದೆ. ಸಿಮ್ ಕಾರ್ಡು ಯಾರ ಹೆಸರಲ್ಲಿದೆ ಎಂಬ ಬಗ್ಗೆ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಾಗಿದೆ.
ಜೈಲಲ್ಲಿರುವ ಪಾಪ್ಯುಲರ್ ಫ್ರಂಟ್ ಮುಖಂಡಗೆ ಸಿಮ್‍ಕಾರ್ಡು ಪೂರೈಕೆ: ಮೂರು ಮಂದಿಗೆ ಜಾಮೀನುರಹಿತ ಕೇಸು
0
ನವೆಂಬರ್ 05, 2022