ಕಾಸರಗೋಡು: ಕಾಂಗ್ರೆಸ್ ತೊರೆದು ಸಿಪಿಎಂ ಪಕ್ಷಕ್ಕೆ ತಾನು ವಿದ್ಯುಕ್ತವಾಗಿ ಸೇರ್ಪಡೆಗೊಳ್ಳಳಿರುವುದಾಗಿ ದೀರ್ಘ ಕಾಲದಿಂದ ಕಾಂಗ್ರೆಸ್‍ನ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ, ಪ್ರಸಕ್ತ ಕಾಂಗ್ರೆಸ್ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿರುವ ಸಿ.ಕೆ ಶ್ರೀಧರನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಶಕ್ತಿ ಕಳೆದುಕೊಂಡಿದೆ.ನೆಹರೂ ಕಾಲದಿಂದ ಅನುಸರಿಸಿಕೊಂಡು ಬರಲಾಗುತ್ತಿದ್ದ ದೃಷ್ಟಿಕೋನಗಳು ಕಾಂಗ್ರೆಸ್‍ನಿಂದ ಇಂದು ದೂರಾಗಿದೆ. ಪಕ್ಷವನ್ನು ಮುನ್ನಡೆಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಅವರ ಧೋರಣೆ ಪಕ್ಷಕ್ಕೆ ಹಾನಿಯುಂಟುಮಾಡಲಿದೆ ಎಂದೂ ಟೀಕಿಸಿದ್ದಾರೆ. ಕಾಂಗ್ರೆಸ್ ಕೇರಳ ಘಟಕ ಆರೆಸ್ಸೆಸ್ ಚಿಂತನೆಯನ್ನು ಪೋಷಿಸುತ್ತಿದ್ದು, ಇದರ ವಿರುದ್ಧ ಹೋರಾಡಲು ಸಿಪಿಎಂನೊಂದಿಗೆ ಕೈಜೋಡಿಸುವುದು ಅನಿವಾರ್ಯವಗಿದೆ. ಈ ಮೂಲಕ ಎಡರಂಗವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಗಿ ಸಿ.ಕೆ ಶ್ರೀಧರನ್ ತಿಳಿಸಿದ್ದಾರೆ.
ಕಾಂಗ್ರೆಸ್ ತ್ಯಜಿಸಿ ಸಿಪಿಎಂ ಸೇರ್ಪಡೆ: ಸಿ.ಕೆ ಶ್ರೀಧರನ್ ಘೋಷಣೆ
0
ನವೆಂಬರ್ 19, 2022
Tags