ಉಪ್ಪಳ: ಎಸ್. ವಿ. ವಿ. ಎಚ್. ಎ ಸ್. ಎಸ್. ಮೀಯಪದವು ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ 61ನೇ ಶಾಲಾ ಕಲೋತ್ಸವ ಇತಿಹಾಸದಲ್ಲಿ ಎಲ್ಲಾ ವಿಭಾಗದ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕಗಳೊದಿಗೆ ಸಮಗ್ರ ಪ್ರಶಸ್ತಿಯನ್ನು ಕಯ್ಯಾರ್ ಡೋನ್ ಬೋಸ್ಕೊ ಎ ಯು ಪಿ ಶಾಲೆ ಸಾಧನೆಯನ್ನು ಮಾಡಿದೆ.
ಕಿರಿಯ ಪ್ರಾಥಮಿಕ ಅರಬಿಕ್ ವಿಭಾಗದಲ್ಲಿ 9 ಸ್ಪರ್ಧೆಗಳಲ್ಲಿ 43 ಅಂಕಗ ಳೊಂದಿಗೆ ಪ್ರಥಮ ಸ್ಥಾನ,ಹಿರಿಯ ಪ್ರಾಥಮಿಕ ಸಂಸ್ಕøತ ವಿಭಾಗದಲ್ಲಿ 18 ಸ್ಪರ್ಧೆಗಳಲ್ಲಿ ಒಟ್ಟು 88 ಅಂಕಗಳೊಂದಿಗೆ ಪ್ರಥಮ ಸ್ಥಾನ, ಕಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ 22 ಸ್ಪರ್ಧಿಗಳಲ್ಲಿ 63 ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಹಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ 36 ಸ್ಪರ್ಧೆಗಳಲ್ಲಿ ಒಟ್ಟು 76 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ . ಪ್ರಪ್ರಥಮ ಬಾರಿಗೆ ಶಾಲಾ ಕಲೋತ್ಸವದ ಎಲ್ಲಾ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಶಾಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕವೃಂದ, ರಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವ: ಕಯ್ಯಾರ್ ಡೋನ್ ಬೋಸ್ಕೋ ಶಾಲೆಯ ಐತಿಹಾಸಿಕ ಸಾಧನೆ
0
ನವೆಂಬರ್ 27, 2022
Tags