ಕನ್ನಡದ ಕಾಂತಾರ ಚಿತ್ರದ ‘ವರಾಹರೂಪಂ’ ಹಾಡಿಗೆ ಸಂಬಂಧಿಸಿದ ವಿವಾದಕ್ಕೆ ಕೋರ್ಟ್ ಮಧ್ಯಪ್ರವೇಶಿಸಿದೆ. ಥಿಯೇಟರ್, ಒಟಿಟಿ, ಯೂಟ್ಯೂಬ್, ಅಮೆಜಾನ್ ನಲ್ಲಿ ಹಾಡು ಒಳಗೊಂಡ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ ನೀಡಿದೆ.
ಪಾಲಕ್ಕಾಡ್‍ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಹಕ್ಕುಸ್ವಾಮ್ಯ ಮಾಲೀಕರು ಸಲ್ಲಿಸಿದ ತಡೆಯಾಜ್ಞೆ ಅರ್ಜಿಯಲ್ಲಿ ಫಿರ್ಯಾದಿದಾರರ ಮಧ್ಯಸ್ಥಿಕೆ ಇದೆ. ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಪೃಥ್ವಿರಾಜ್ ಪೆÇ್ರಡಕ್ಷನ್ಸ್, ಅಮೆಜಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಡೆವೊ ಮ್ಯೂಸಿಕ್ ಮತ್ತು ಜಿಯೋಸವನ್ ಥಿಯೇಟರ್‍ಗಳು ಮತ್ತು ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿ ಹಾಡನ್ನು ಪ್ರದರ್ಶನ, ಬಿಡುಗಡೆ, ಸ್ಟ್ರೀಮಿಂಗ್ ಮತ್ತು ವಿತರಣೆ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಚಿತ್ರದಲ್ಲಿನ ಹಾಡು ಪ್ರಸಿದ್ಧ ಸಂಗೀತ ಬ್ರ್ಯಾಂಡ್ ತೈಕುಡಂ ಬ್ರಿಡ್ಜ್ ನ ನವರಸಂ ಹಾಡಿನ ನಕಲು ಆಗಿದ್ದು, ತೈಕುಡಂ ಬ್ರಿಡ್ಜ್ ನ ಅನುಮತಿಯಿಲ್ಲದೆ ಹಾಡನ್ನು ಬಳಸಬಾರದು ಎಂದು ಕೋಝಿಕ್ಕೋಡ್ ನ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ತೀರ್ಪಿನ ನಂತರ, ಚಿತ್ರಮಂದಿರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಡನ್ನು ಪ್ರದರ್ಶಿಸುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದರು.
ಮತ್ತೆ ಹಿನ್ನಡೆ; ಕಾಂತಾರದ ‘ವರಾಹರೂಪಂ’ ಹಾಡನ್ನು ಥಿಯೇಟರ್ ಮತ್ತು ಒಟಿಟಿಯಲ್ಲಿ ಪ್ರದರ್ಶಿಸದಂತೆ ಕೋರ್ಟ್ ಆದೇಶ
0
ನವೆಂಬರ್ 02, 2022