ಕಾಸರಗೋಡು: ನಿನ್ನೆ ಸಂಜೆ ಮಾವೇಲಿ ಎಕ್ಸ್‍ಪ್ರೆಸ್‍ನಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿದೆ. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್ ಪ್ರೆಸ್ ನಲ್ಲಿ ಈ ಘಟನೆ ನಡೆದಿದೆ.
ಸಾಮಾನ್ಯ ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 25 ವಿದ್ಯಾರ್ಥಿಗಳು ಘರ್ಷಣೆ ನಡೆಸಿದರು. ಮಂಗಳೂರಿನಲ್ಲಿ ವಿವಿಧ ಕಾಲೇಜಿಗೆ ತೆರಳುವ ಮಲಯಾಳಿ ವಿದ್ಯಾರ್ಥಿಗಳು ಘರ್ಷಣೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ರೈಲಿನಲ್ಲಿ ಗಲಾಟೆ ಮಾಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಮಂಜೇಶ್ವರ ನಿಲ್ದಾಣ ದಾಟಿದ ನಂತರ ವಿದ್ಯಾರ್ಥಿಗಳು ಘರ್ಷಣೆಗಿಳಿದರು. ಕಾಲೇಜಿನಲ್ಲಿ ನಡೆದ ರ ್ಯಾಗಿಂಗ್ ವಿಚಾರವಾಗಿ ಮಾತಿನ ಚಕಮಕಿ ನಡೆದು ಕಲ್ಲುತೂರಾಟ ನಡೆದಿದೆ. ಮಾರಾಮಾರಿ ಹೆಚ್ಚಾದಂತೆ ಪ್ರಯಾಣಿಕರು ಮಧ್ಯಪ್ರವೇಶಿಸಿದರು. ಕೊನೆಗೆ ಪ್ರಯಾಣಿಕರು ಆರ್‍ಪಿಎಫ್‍ಗೆ ಮಾಹಿತಿ ನೀಡಿದರು. ರೈಲು ಕಾಸರಗೋಡು ತಲುಪಿದಾಗ, ಆರ್‍ಪಿಎಫ್ ಆಗಮಿಸಿತು. ಈ ಮಧ್ಯೆ ವಿದ್ಯಾರ್ಥಿಗಳು ಓಡಿ ಪರಾರಿಯಾದರು.
ಘರ್ಷಣೆಯ ವೇಳೆ ಘಟನಾವಳಿಗಳನ್ನು ವೈರಲ್ ಗೊಳಿಸಲೂ ಪ್ರಯತ್ನಿಸಲಾಯಿತು. ವಿದ್ಯಾರ್ಥಿಗಳು ಸಾಮಾನ್ಯವಾಗಿ ಸಂಜೆ ಮೆಮು ರೈಲಲ್ಲಿ ಮಂಗಳೂರಿಂದ ಹಿಂತಿರುಗುವುದು ವಾಡಿಕೆ. ಕ್ಯಾಮೆರಾ ಇದ್ದುದರಿಂದ ಮೆಮು ಪ್ರಯಾಣವನ್ನು ಮಾವೇಲಿಗೆ ಬದಲಾಯಿಸಲಾಗಿತ್ತು. ಮೊನ್ನೆಯμÉ್ಟೀ ಮನ್ನಾರ್‍ನಲ್ಲಿ ವಿದ್ಯಾರ್ಥಿಗಳು ನಡುರಸ್ತೆಯಲ್ಲಿ ಘರ್ಷಣೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಮಾವೇಲಿ ಎಕ್ಸ್ ಪ್ರೆಸ್ ನಲ್ಲಿ ಘರ್ಷಣೆ: ವಿದ್ಯಾರ್ಥಿಗಳ ಮಧ್ಯೆ ಸಂಘರ್ಷ: ಓಡಿ ಪರಾರಿಯಾದ ಪೋಲೀಹುಡುಗರು
0
ನವೆಂಬರ್ 17, 2022
Tags