HEALTH TIPS

ಬಜಕೂಡ್ಲು ಗೋವುಗಳಿಗೆ ಮುಜುಂಗಾವಿನಿಂದ ಮೇವು ಸಂಗ್ರಹ

Top Post Ad

Click to join Samarasasudhi Official Whatsapp Group

Qries


       ಪೆರ್ಲ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳಿಗಾಗಿ ಗೋಪ್ರೇಮಿಗಳಿಂದ ಗೋವಿಗಾಗಿ ಮೇವು ಮೇವಿಗಾಗಿ ನಾವು ಸೇವಾ ಅಘ್ರ್ಯ ಮುಜುಂಗಾವು ಸಮೂಹ ಸಂಸ್ಥೆಗಳ ಪರಿಸರದಲ್ಲಿ ಜರಗಿತು. ಕಳೆದ ಕೆಲವು ವರ್ಷಗಳಿಂದ ಆರಂಭಗೊಂಡ ಮೇವು ಸಂಗ್ರಹ ಅಭಿಯಾನದಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬೆಳಗ್ಗೆ ಯಂತ್ರದ ಮೂಲಕ ಒಣ ಹುಲ್ಲನ್ನು ತುಂಡರಿಸಲಾಯಿತು. ಅಪರಾಹ್ನ ಕಾರ್ಯಕರ್ತರ ತಂಡ ಹುಲ್ಲನ್ನು ಸಂಗ್ರಹಿಸಿ ವಾಹನದ ಮೂಲಕ ಗೋಶಾಲೆಗೆ ಸಾಗಿಸಲಾಯಿತು. ಸಂಘಟನೆ ಮತ್ತು ಸಹಕಾರದಲ್ಲಿ ಮುಂಚೂಣಿಯಲ್ಲಿರುವ ಡಾ.ಡಿ.ಪಿ. ಭಟ್ ದಂಪತಿಗಳು ಸೇವಾ ಅರ್ಘ್ಯದ ಸಂಪೂರ್ಣ ಪ್ರಾಯೋಜಕತ್ವ ವಹಿಸಿದರು. ಕುಂಬಳೆ ವಲಯದ ನೇತೃತ್ವದಲ್ಲಿ ಇತರ ವಲಯದ ಕಾರ್ಯಕರ್ತರು, ಗೋಪ್ರೇಮಿಗಳು ಮೇವು ಸಂಗ್ರಹದಲ್ಲಿ ಪಾಲ್ಗೊಂಡಿದ್ದರು. ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
          ಸಂಘಟನಾ ಖಂಡದ ಶ್ರೀಸಂಯೋಜಕರೂ, ಕಾಮದುಘಾ ಟ್ರಸ್ಟಿನ ಅಧ್ಯಕ್ಷರೂ ಆದ ಡಾ ವೈ. ವಿ ಕೃಷ್ಣಮೂರ್ತಿ, ಗೋಪಾಲ ಕೃಷ್ಣ ಭಟ್, ಕೇಶವ ಪ್ರಸಾದ ಎಡಕ್ಕಾನ, ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಮಹಾಬಲೇಶ್ವರ ಶರ್ಮ, ರಮೇಶ ಭಟ್ ಕಾಸರಗೋಡು, ಕಿರಣಮೂರ್ತಿ, ಶ್ಯಾಮ ಪ್ರಸಾದ ಸರಳಿ ವಲಯದ ಶ್ರೀಕಾರ್ಯಕರ್ತರು ಭಾಗವಹಿಸಿದ್ದರು.



          

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries