ಮಂಜೇಶ್ವರ: ಮಾದಕ ವಸ್ತು ಮುಕ್ತ ಕೇರಳ ಅಭಿಯಾನದ ಅಂಗವಾಗಿ ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ ಮಂಗಳವಾರ ಮಾದಕವಸ್ತು ವಿರೋಧಿ ಕಾರ್ಯಕ್ರಮ ಮೀಯಪದವು ಪರಿಸರದಲ್ಲಿ ಅಯೋಜಿಸಲಾಯಿತು. ಕಾರ್ಯಕ್ರಮವನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ ಉದ್ಘಾಟಿಸಿದರು. ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ.ಬಿ, ಶಾಲಾ ಆಡಳಿತ ಸಲಹೆಗಾರ ಶ್ರೀಧರ್.ರಾವ್, ಪಿಟಿಎ ಅಧ್ಯಕ್ಷ ಕೃಷ್ಣ ಪ್ರಸಾದ್, ರಕ್ಷಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾನವ ಸಂಕಲೆ, ಪ್ರತಿಜ್ಞೆ ಹಾಗೂ ಗಾಯನ ಕಾರ್ಯಕ್ರಮಗಳು ನಡೆಯಿತು.
ಮೀಯಪದವಲ್ಲಿ ಮಾದಕವಸ್ತು ವಿರುದ್ದ ಕಾರ್ಯಕ್ರಮ
0
ನವೆಂಬರ್ 03, 2022