ಅಯೋಧ್ಯ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿದ್ದು, ಅಲ್ಲಿನ ಪ್ರಸಿದ್ಧ ಹನುಮಂಗರಹಿ ದೇವಾಲಯ ಮತ್ತು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ರಾಮ ಮಂದಿರದ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ. ತೆದಿ ಬಜಾರ್ ಗೂ ಭೇಟಿ ನೀಡಿದ ಆದಿತ್ಯ ನಾಥ್, ಬಹು ಹಂತದ ಪಾರ್ಕಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕಳೆದ 40 ದಿನಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ನಾಲ್ಕನೇ ಬಾರಿಯ ಅಯೋಧ್ಯ ಭೇಟಿಯಾಗಿದೆ. ಈ ಹಿಂದೆ ಅಕ್ಟೋಬರ್ 19 ರಂದು ದೀಪೋತ್ಸವದ ಸಿದ್ಧತೆ ಮತ್ತು ಅಕ್ಟೋಬರ್ 23 ರಂದು ಪ್ರಧಾನಿ ಮೋದಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಯೋಧ್ಯಗೆ ಭೇಟಿ ನೀಡಿದ್ದರು.
ಅಲ್ಲದೇ, ಅಕ್ಟೋಬರ್ 24 ರಂದು ಮತ್ತೆ ಹನುಮಂಗರಹಿ ದೇವಾಲಯ ಮತ್ತು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು.