ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯುತ್ತಿರುವ ಅಗಲ್ಪಾಡಿ ಮಾರ್ಪನಡ್ಕ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸ್ವಚ್ಛತಾ ಪರಿಶೀಲನೆ ನಡೆಸಲಾಯಿತು. ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್ ನೇತೃತ್ವದ ತಂಡ ತಪಾಸಣೆ ನಡೆಸಿತು. ಹೋಟೆಲ್‍ಗಳು, ಗೂಡಂಗಡಿಗಳು, ಐಸ್‍ಕ್ರೀಂ, ಕಬ್ಬಿನ ಜ್ಯೂಸ್ ಮತ್ತು ಅವಿಲ್ ಮಿಲ್ಕ್ ಅಂಗಡಿಗಳಂತಹ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಪ್ಲಾಸ್ಟಿಕ್ ಮುಕ್ತ ದ್ಯೇಯದೊಂದಿಗೆ ಕಲೋತ್ಸವ ನಡೆಯುತ್ತಿದೆ. ಕಲೋತ್ಸವದಲ್ಲಿ ಪ್ಲಾಸ್ಟಿಕ್ ತಪಾಸಣೆಯನ್ನೂ ಬಲಪಡಿಸಲಾಗಿದೆ. ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರದ ಪ್ರಾಥಮಿಕ ಚಿಕಿತ್ಸಾ ತಂಡವೂ ಶಾಲೆಯಲ್ಲಿ ಬೀಡುಬಿಟ್ಟು ಕಾರ್ಯನಿರ್ವಹಿಸುತ್ತಿದೆ.
ಕಲೋತ್ಸವ ನಗರಿಯಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ನೈರ್ಮಲ್ಯ ತಪಾಸಣೆ
0
ನವೆಂಬರ್ 23, 2022