HEALTH TIPS

ಶ್ರದ್ಧಾ ವಾಲಕರ್‌ ಹಂತಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು: ಸಂಜಯ್ ರಾವುತ್

 

           ಮುಂಬೈ: ಕಾಲ್‌ಸೆಂಟರ್‌ ಉದ್ಯೋಗಿ, ಮುಂಬೈ ಮೂಲದ ಶ್ರದ್ಧಾ ವಾಲಕರ್‌ ಹಂತಕನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಶಿವಸೇನಾ ಸಂಸ‌ದ ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

                ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಮಾಜದಲ್ಲಿ ಮಹಿಳೆಯರು ಜಾಗರೂಕರಾಗಿರಬೇಕು.

               ಶ್ರದ್ಧಾ ಹತ್ಯೆ ಪ್ರಕರಣವನ್ನು ಸಾರ್ವಜನಿಕರು 'ಲವ್ ಜಿಹಾದ್' ಅಥವಾ ಇನ್ನೇನಾದರೂ ಕರೆಯಬಹುದು. ಆದರೆ, ಮಹಿಳೆಯರು ಸಾವಿಗೀಡಾಗುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕಾನೂನು ಏನನ್ನೂ ಮಾಡಲು ಸಾಧ್ಯವಿಲ್ಲ. ಅದನ್ನು ಸಮಾಜವೇ ನಿಭಾಯಿಸಬೇಕು' ಎಂದು ಹೇಳಿದ್ದಾರೆ.


                 ಶ್ರದ್ಧಾ ವಾಲಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು (28) ‌ದೆಹಲಿ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

                       ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್‌ ಪ್ರೇಯಸಿ ಶ್ರದ್ಧಾಳ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿದ್ದ.

Mumbai | Shraddha's killer should be hanged publicly & our women should remain cautious. People might call it 'love jihad' or whatever but our women are dying. In such cases, the law cannot do anything, it has to be dealt with by society: Shiv Sena MP Sanjay Raut, earlier today

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries