ಬದಿಯಡ್ಕ: ಕುಗ್ರಾಮವಾಗಿದ್ದ ಕುಕ್ಕಂಕೋಡ್ಲು ಧಾರ್ಮಿಕ ಪ್ರಕ್ರಿಯೆಗಳಿಂದ ಬೆಳಕನ್ನು ಕಂಡಿದೆ. ಭಕ್ತಾದಿಗಳ ಒಗ್ಗಟ್ಟಿನ ಪ್ರಾರ್ಥನೆಯ ಫಲವಾಗಿ ನೂರಾರು ವರ್ಷಗಳ ಇತಿಹಾಸವಿರುವ ಕ್ಷೇತ್ರವು ಅಭಿವೃದ್ಧಿಯನ್ನು ಕಂಡಿದೆ ಎಂದು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಹಿರಿಯ ವಕೀಲ ಗೌರಿಶಂಕರ್ ರೈ ಕೋಡಿಂಗಾರು ಗುತ್ತು ಹೇಳಿದರು.
ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಜರಗಿದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತಾರಾನಾಥ ಆಳ್ವ, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕೊಳತ್ತಾಯ ಮನೆತನದವರಾದ ಕೃಷ್ಣ ಕೊಳತ್ತಾಯ ಉಡುಪಿ, ಶ್ರೀ ಕ್ಷೇತ್ರದ ಮಹಿಳಾ ಘಟಕದ ಗೌರವಾಧ್ಯಕ್ಷೆ ಮೈನಾ ಜಿ ರೈ, ಕಾರ್ಯಾಧ್ಯಕ್ಷ ಏವುಂಜೆ ಶ್ಯಾಂ ಭಟ್, ಪ್ರಧಾನ ಕಾರ್ಯದರ್ಶಿ ಮಹೇಶ ಭಟ್ ಪಡಿಯಡ್ಪು, ಬ್ಲಾಕ್ ಪಂಚಾಯಿತಿ ಸದಸ್ಯೆ ವಿದುಷಿಃ ಅಶ್ವಿನಿ ಭಟ್, ಕಜಳ ಉದಯ ಭಟ್, ನಾರಾಯಣ ಮಯ್ಯ, ಚಂದ್ರಹಾಸ ರೈ ಶುಭಾಶಂಂಸನೆಗೈದರು. ಜೀರ್ಣೋದ್ದಾರ ಸಮಿತಿ ಲೆಕ್ಕಪತ್ರ ಕೋಶಾಧಿಕಾರಿ ಪೆರ್ವ ಕೃಷ್ಣ ಭಟ್ ಮಂಡಿಸಿದರು. ಬ್ರಹ್ಮಕಲಶೋತ್ಸವ ಲೆಕ್ಕಪತ್ರವನ್ನು ಕೋಶಾಧಿಕಾರಿ ಸುರೇಶ್ ಭಟ್ ಏವುಂಜೆ ಮಂಡಿಸಿದರು. ಭಕ್ತಾದಿಗಳ ಸರ್ವಾನುಮತದಿಂದ ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರು ಅನುಗ್ರಹ ಭಾಷಣ ಮಾಡಿದರು. ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪೆರ್ವ ಕೃಷ್ಣ ಭಟ್ ವಂದಿಸಿದರು. ಬಲಿವಾಡು ಕೂಟದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ತಂತ್ರಿಗಳ ಉಪಸ್ಥಿತಿಯಲ್ಲಿ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.