ಮುಳ್ಳೇರಿಯ: ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು. ಶ್ರೀ ಕ್ಷೇತ್ರದ ಪ್ರಬಂಧಕ ಸೀತಾರಾಮ ಬಳ್ಳುಳ್ಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾದೋಪಾಸನೆಯ ಸಂಗೀತ ನಮ್ಮ ಸಂಸ್ಕøತಿಯಾಗಿದೆ. ಸಂಗೀತದ ನಿರಂತರ ಆಸ್ವಾದನೆಯು ಪ್ರತಿಯೊಂದು ಜೀವಿಯ ಆರೋಗ್ಯಕ್ಕೆ ಪೂರಕವಾಗಿದೆ. ಸಂಗೀತದ ಮೂಲಕ ದೇವರ ನಾಮಸ್ಮರಣೆ ನಿರಂತರ ನಡೆಯುತ್ತಿರಲಿ ಎಂದು ಶುಭಹಾರೈಸಿದರು.
ಬಳಿಕ ಸಂಗೀತÀಶಾಲೆಯ ವಿದ್ಯಾರ್ಥಿಗಳಿಂದ ಸುಮಧುರ ಸಂಗೀತ ಉಪಾಸನೆ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಗುರುಗಳಾದ ವಿದುಷಿ ಉಷಾ ಈಶ್ವರ ಭಟ್ ಅವರು ಸಂಗೀತ ಕಚೇರಿ ನಡೆಸಿಕೊಟ್ಟರು. ಪಿಟೀಲಿನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ಮೃದಂಗದಲ್ಲಿ ವಿದ್ವಾನ್ ಅನಿಲಕ್ಕಾಡ್ ಡಾ ಆರ್ ಜಯಕೃಷ್ಣನ್, ಘಟಂ ನಲ್ಲಿ ವಿದ್ವಾನ್ ಬಿ.ಜಿ. ಈಶ್ವರ ಭಟ್ ಸಾಥ್ ನೀಡಿದರು. ಕಾರ್ಯಕ್ರಮದ ಕೊನೆಗೆ ಸಂಗೀತ ಕಲಾವಿದರನ್ನು ಶ್ರೀ ಕ್ಷೇತ್ರ ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ ಗೌರವಿಸಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ರಾಘವನ್ ಬೆಳ್ಳಿಪ್ಪಾಡಿ ವಂದಿಸಿದರು. ಶಾಸ್ತಾ ಕುಮಾರ ನಿರೂಪಣೆ ಮಾಡಿದರು.
ಮುಳಿಯಾರು ಸ್ಕಂದ ನಿನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ
0
ನವೆಂಬರ್ 17, 2022
Tags