HEALTH TIPS

ವೆಡ್ಡಿಂಗ್​ ಫೋಟೋಶೂಟ್​ ವೇಳೆ ಕೆರಳಿದ ಆನೆ: ಮಾವುತ ಬಚಾವ್​ ಆಗಿದ್ದೇ ರೋಚಕ, ವಿಡಿಯೋ ವೈರಲ್​

Top Post Ad

Click to join Samarasasudhi Official Whatsapp Group

Qries

 

               ಗುರುವಾಯೂರು: ಆನೆಯ ಮುಂದೆ ನಿಂತು ವೆಡ್ಡಿಂಗ್​ ಫೋಟೋಶೂಟ್​ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕೆರಳಿದ ಆನೆ ಮಾವುತನ ಮೇಲೆ ಅಟ್ಟಹಾಸ ಮೆರೆದ ಘಟನೆ ಗುರುವಾಯೂರು ದೇವಸ್ಥಾನದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

                    ಈ ಘಟನೆ ನವೆಂಬರ್​ 10ರಂದು ಬೆಳಗ್ಗೆ ದೇವಸ್ಥಾನ ದಕ್ಷಿಣ ದ್ವಾರದ ಬಳಿ ನಡೆದಿದೆ. ಆನೆಯ ಹೆಸರು ದಾಮೋದರ್​ ದಾಸ್​. ದೇವಸ್ಥಾನದ ಮೆರವಣಿಗೆಯ ಬಳಿಕ ಆನೆಯನ್ನು ಮರಳಿ ಕರೆತರಲಾಗುತ್ತಿತ್ತು. ಈ ವೇಳೆ ಅನೇಕ ಭಕ್ತರು ಸಹ ಅಲ್ಲಿಯೇ ಇದ್ದರು. ಕ್ಯಾಮೆರಾಮೆನ್​ ನವವಿವಾಹಿತರ ಫೋಟೋಶೂಟ್​ ನಡೆಸುತ್ತಿದ್ದರು.

                 ಇದ್ದಕ್ಕಿದ್ದಂತೆ ಕೆರಳಿದ ಆನೆ ಮೊದಲು ಮಾವುತನನ್ನು ಕೆಳಗೆ ಕೆಡವಿ, ದಂತದಿಂದ ಆತನನ್ನು ಮೇಲಕ್ಕೆ ಎತ್ತಿ ಬೀಸಾಡಿತು. ಮಾವುತನ ಅದೃಷ್ಟ ಚೆನ್ನಾಗಿದ್ದರಿಂದ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾನೆ. ಆನೆಯ ಮೇಲೆ ಕುಳಿತ ಮತ್ತೊಬ್ಬ ಮಾವುತ ಆನೆಯನ್ನು ಸಮಾಧಾನಪಡಿಸಿದನು.

                  ಮೊದಲ ಮಾವುತ ಎ.ವಿ.ರಾಧಾಕೃಷ್ಣನ್ ಬಚಾವ್​ ಆಗಿದ್ದು ಪವಾಡವೇ ಸರಿ ಎಂದು ನೋಡುಗರು ಅಭಿಪ್ರಾಯಪಟ್ಟಿದ್ದಾರೆ. ಬಳಿಕ ಆನೆಯನ್ನು ಹತೋಟಿಗೆ ತಂದು ದೇವಸ್ಥಾನದ ಆವರಣದಲ್ಲಿರುವ ಮರಕ್ಕೆ ಕಟ್ಟಿ ಹಾಕಲಾಯಿತು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries