ನವದೆಹಲಿ : ಕಳೆದ ಎಂಟು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ಹಾಲು ಉತ್ಪಾದನೆ ಕುರಿತು ಸಂಸತ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು 'ನಾರಿ ಶಕ್ತಿಯನ್ನು ಮತ್ತಷ್ಟು ಬಲಗೊಳಿಸಲು ಹೈನುಗಾರಿಕೆ ಕ್ಷೇತ್ರವು ಮುಖ್ಯ ಪಾತ್ರವಹಿಸುತ್ತದೆ' ಎಂದು ಅಭಿಪ್ರಾಯಪಟ್ಟರು.
ಹಾಲು ಉತ್ಪಾದನೆಯಲ್ಲಿ ಕಳೆದ ಎಂಟು ವರ್ಷಗಳಲ್ಲಿ 'ಅಭೂತಪೂರ್ವ ಬೆಳವಣಿಗೆ' ಆಗಿದೆ ಎಂದು ಕೇಂದ್ರ ಮೀನುಗಾರಿಕೆ, ಪ್ರಾಣಿ ಸಾಕಾಣಿಕೆ ಮತ್ತು ಹೈನುಗಾರಿಕೆ ಸಚಿವ ಪುರುಶೋತ್ತಮ್ ರುಪಾಲಾ ಅವರು ಮಾಡಿದ ಟ್ವೀಟ್‌ಗೆ ಪ್ರಧಾನಿ ಮೋದಿ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅವಧಿಯಲ್ಲಿ ಕೇವಲ ಎಂಟು ವರ್ಷಗಳಲ್ಲಿ 8.3 ಕೋಟಿ ಟನ್‌ನಷ್ಟು ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಆದರೆ, ಕಳೆದ 63 ವರ್ಷಗಳಲ್ಲಿ ಕೇವಲ 12.1ಕೋಟಿ ಟನ್‌ನಷ್ಟು ಮಾತ್ರ ಹೆಚ್ಚಳವಾಗಿತ್ತು' ಎಂದು ಸಚಿವ ಟ್ವೀಟ್ ಮಾಡಿದ್ದರು.