ಕಾಸರಗೋಡು: 2020-2022ನೇ ಸಾಲಿನ ಸ್ಟೂಡೆಂಟ್ ಪೊಲೀಸ್ ಕ್ಯಾಡೆಟ್(ಎಸ್.ಪಿ.ಸಿ)ಕಾಸರಗೋಡು ಬ್ಯಾಚಿನ ನಿರ್ಗಮಿತಿ ವಿದ್ಯಾರ್ಥಿಗಳ ಪಾಸಿಂಗ್ ಔಟ್ ಪರೇಡ್ ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಯಿತು.
ಎಸ್.ಪಿ.ಸಿ ನೋಡಲ್ ಅಧಿಕಾರಿ ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಎಂ.ಎಂ. ಮ್ಯಾಥ್ಯೂ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಎ.ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಐ ಎಂ.ವಿ ವಿಷ್ಣುಪ್ರಸಾದ್, ಮಕ್ಕಳ ಸನೇಹಿ ಅಧಿಕಾರಿ ಟೌನ್ ರಾಜಕುಮಾರ, ಮಕ್ಕಳ ಸ್ನೇಹಿ ಅಧಿಕಾರಿ ಎಸ್.ಐ ಕೆ.ವಿ ಸಉಧಾಕರನ್, ಜಿಎಚ್‍ಎಸ್ ಕಾಸರಗೋಡು ಪ್ರಭಾರಿ ಮುಖ್ಯೋಪಾಧ್ಯಾಯ ಟಿ.ಎಂ. ರಾಜೇಶ್, ನಿವೃತ್ತ ಮುಖ್ಯ ಶಿಕ್ಷಕ ಎಂ.ಸಿದ್ದೀಕ್, ಶಾಲಾ ಎಸ್‍ಪಿಸಿ ಪ್ರಭಾರ ಅಧಿಕಾರಿ ಡಾ. ಸಂಧ್ಯಾ ಕುಮಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪೊಲೀಸ್ ಪಡೆ: ನಿರ್ಗಮಿತ ವಿದ್ಯಾರ್ಥಿಗಳ ಪಾಸಿಂಗ್ ಔಟ್ ಪೆರೇಡ್
0
ನವೆಂಬರ್ 09, 2022