ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟುವಿನ ದೇವಸ್ಥಾನದಿಂದ ವಿಗ್ರಹಕ್ಕೆ ತೊಡಿಸಿದ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಅರ್ಚಕ ದೀಪಕ್ ನಂಬೂದಿರಿ(39)ಯನ್ನು ತಿರುವನಂತಪುರದಿಂದ ಮಂಜೇಶ್ವರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಮಂಜೇಶ್ವರ ಠಾಣೆ ಎಸ್.ಐ ಎಸ್.ಕೆ ಸುಮೇಶ್ ರಾಜ್, ಸಿವಿಲ್‍ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಇಲ್ಲಿನ ಶ್ರೀ ಮಂಗೇಶ ಮಹಾಲಕ್ಷ್ಮೀ ಶಾಂತದುರ್ಗಾ ದೇವಸ್ಥಾನದಿಂದ ವಿಗ್ರಹಕ್ಕೆ ತೊಡಿಸಲಾದ ಐದುವರೆ ಪವನು ಚಿನ್ನವನ್ನು ಎಗರಿಸಿದ ಅರ್ಚಕ, ದೇವರಿಗೆ ಅದೇ ಮಾದರಿಯ ನಕಲಿ ಆಭರಣ ತೊಡಿಸಿ ಪರಾರಿಯಾಗಿದ್ದನು. ಅ. 27ರಿಂದ ಈತನನ್ನು ಇಲ್ಲಿ ಪೂಜೆಗೆ ನೇಮಿಸಲಾಗಿದ್ದು, 29ರಂದು ಸಂಜೆ ಹೊಸಂಗಡಿ ಪೇಟೆಗೆ ತೆರಳುವುದಾಗಿ ದೇವಸ್ಥಾನದ ಸೆಕ್ಯೂರಿಟಿಗೆ ತಿಳಿಸಿ ತೆರಳಿದವ ವಾಪಸಾಗಿರಲಿಲ್ಲ. ಈತನ ಮೊಬೈಲ್ ಸ್ವಿಚ್‍ಆಫ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೂಜೆಗಾಗಿ ಸಿದ್ಧಾಪುರದ ಶ್ರೀಧರ ಭಟ್ ಎಂಬವರನ್ನು ನೇಮಿಸಲಾಗಿತ್ತು. ಇವರು ಪೂಜೆಗೆ ಗರ್ಭಗುಡಿಗೆ ತೆರಳಿದಾಗ ದೇವರ ವಿಗ್ರಹದಲ್ಲಿ ಹೊಳಪಿನಿಂದ ಕೂಡಿದ ಹೊಸ ಆಭರಣ ಕಂಡುಬಂದಿದ್ದು, ಈ ಬಗ್ಗೆ ಮೊಕ್ತೇಸರರಲ್ಲಿ ವಿಚಾರಿಸಿದಾಗ ಆಭರಣ ಬದಲಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ತಪಾಸಣೆ ನಡೆಸಿದಾಗ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿತ್ತು. ಒಟ್ಟು ಐದುವರೆ ಪವನು ಚಿನ್ನ ಕಳವಾಗಿತ್ತು.
ವಿಗ್ರಹಕ್ಕೆ ತೊಪಡಿಸಿದ್ದ ಚಿನ್ನಾಭರಣ ಕಳವುಗೈದ ಅರ್ಚಕನ ಬಂಧನ
0
ನವೆಂಬರ್ 05, 2022