ಈ ವರ್ಷ ಫ್ಲೂ ಸಮಸ್ಯೆ ಸ್ವಲ್ಪ ಬೇಗನೆ ಶುರುವಾಗಿದೆ, ಈಗಾಗಲೇ ತುಂಬಾ ಜನರು ಜ್ವರ, ಶೀತ, ತಲೆನೋವು ಈ ಬಗೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವು ಕಡೆಯಂತೂ ಚಳಿ ತುಂಬಾನೇ ಇದೆ.
ಸಾಮಾನ್ಯವಾಗಿ ಫ್ಲೂ ಸಮಸ್ಯೆ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಬರುತ್ತಿತ್ತು, ಇದೀಗ ನವೆಂಬರ್‌ನಿಂದಲೇ ಶುರುವಾಗಿರುವುದರಿಂದ ಜನವರಿ-ಫೆಬ್ರವರಿ ತಿಂಗಳಿನಲ್ಲಿ ಪರಿಸ್ಥಿತಿ ಮತ್ತಷ್ಟ ಹದಗೆಡಬಹುದೇ? ಈ ವರ್ಷ ಫ್ಲೂ ಸಮಸ್ಯೆ ಇಷ್ಟು ಬೇಗ ಕಾಣಿಸಿಕೊಳ್ಳಲು ಕಾರಣವೇನು, ಇದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:
ಫ್ಲೂ ಅಥವಾ ವೈರಲ್ ಸೋಂಕು ತುಂಬಾ ಬೇಗನೆ ಹರಡಲು ಕಾರಣವೇನು?
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತುಂಬಾ ಜನರಿಗೆ ಫ್ಲೂ ಸಮಸ್ಯೆ ಕಂಡು ಬರುತ್ತಿದೆ. ಏಕೆಂದರೆ ಆ ಎರಡು ವರ್ಷ ಜನರು ಹೊರಗಡೆ ಹೋಗುವಾಗ ಮಾಸ್ಕ್ ಧರಿಸದೆ ಹೋಗುತ್ತಿರಲಿಲ್ಲ, ಕೊರೊನಾವೈರಸ್‌ಗೆ ಭಯಪಟ್ಟು ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ತೊಳೆಯುವುದು ಮಾಡುತ್ತಿದ್ದರು, ಇದರಿಂದಾಗಿ ಕೊರೊನಾವೈರಸ್ ಮಾತ್ರವಲ್ಲ ಇಂಥ ಫ್ಲೂ ಸಮಸ್ಯೆ ಕೂಡ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಕಡಿಮೆಯಾಗುತ್ತಿತ್ತು. ಆದರೆ ಈಗ ಈ ಅಭ್ಯಾಸಗಳು ಕಡಿಮೆಯಾಗುತ್ತಿದೆ. ಅಲ್ಲದೆ ವಾತಾವರಣದಲ್ಲಿ ಚಳಿ ಕೂಡ ಅಧಿಕವಾಗಿರುವುದರಿಂದ ಹೆಚ್ಚಿನ ಜನರು ಕಾಯಿಲೆ ಬೀಳುತ್ತಿದ್ದಾರೆ.
ಲಸಿಕೆ ಕೂಡ ಮುಖ್ಯವಾಗುತ್ತದೆ
ಕೊರೊನಾ ಬಂದ ಮೇಕೆ ಫ್ಲೂ ಶಾಟ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯಗುತ್ತಿದೆ ಎಂದು ಅಧ್ಯಯನ ವರದಿಗಳು ಹೇಳಿವೆ. ಕೊರೊನಾವೈರಸ್‌ಗೆ ಲಸಿಕೆ ತೆಗದುಕೊಳ್ಳುವುದರಿಂದ ಮತ್ತೊಂದು ಪ್ಲೂ ಶಾಟ್ ಹಾಕಿಸಿಕೊಳ್ಳೋಕೆ ಮನಸ್ಸು ಮಾಡುತ್ತಿಲ್ಲ, ಈ ಕಾರಣದಿಂದಾಗಿ ಫ್ಲೂ ತುಂಬಾ ಬೇಗನೆ ಹರಡುತ್ತಿದೆ.
ಫ್ಲೂ ಜೊತೆಗೆ ಇತರ ವೈರಸ್‌ಗಳೂ ಹೆಚ್ಚಾಗಿ ಕಾಡುವುದು
ಈಗ RSV,ಇನ್‌ಫ್ಲೂಯೆಂಜಾ, ಪಾರಾ ಇನ್‌ಫ್ಲೂಯೆಂಜಾ, SARS-CoV-2(ಇದುವೇ ಕೊರೊನಾ ತರುವ ವೈರಸ್ ಆಗಿದೆ) ಕೂಡ ಹರಡುತ್ತಿದೆ. ಈ ಫ್ಲೂ, ಈ ಎಲ್ಲಾ ವೈರಸ್‌ಗಳ ಲಕ್ಷಣಗಳೇನು ಭಿನ್ನವಾಗಿಲ್ಲ.
ಈ ವೈರಸ್‌ಗಳು ತಗುಲಿದಾಗ ಜ್ವರ, ಶೀತ, ಕೆಮ್ಮು, ತಲೆಸುತ್ತು ಈ ಸಮಸ್ಯೆಗಳು ಕಂಡು ಬರುವುದು.
ಚಳಿಗಾಲದಲ್ಲಿ ಫ್ಲೂ ಲಸಿಕೆಯನ್ನು ಯಾರು ಪಡೆದುಕೊಳ್ಳಲೇಬೇಕು?
ಫ್ಲೂ ಶಾಟ್ ಎಲ್ಲರೂ ಪಡೆದುಕೊಳ್ಳಬೇಕು, ಆದರೆ ಈ ಕೆಳಗಿನವರು ಕಡ್ಡಾಯವಾಗ ಪಡೆದರೆ ಆರೋಗ್ಯ ಕಾಪಾಡಿಕೊಳ್ಳಬಹುದು
* 65 ವರ್ಷ ಮೇಲ್ಪಟ್ಟವರು
* ದೀರ್ಘ ಸಮಯದಿಂದ ಇತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ
* ಅಸ್ತಮಾ, COPD ಸಮಸ್ಯೆಯಿದ್ದರೆ
* ಹೃದಯಾ ಸಮಸ್ಯೆ, ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರೆ
* ಪಾರ್ಶ್ವವಾಯು, ಪಾರ್ಕಿಸನ್ಸ್, ಇತರ ನರ ಸಮಬಂಧಿ ಸಮಸ್ಯೆಯಿದ್ದರೆ
* ದುರ್ಬಲ ರೋಗ ನಿರೋಧಕ ಶಕ್ತಿ ಇರುವವರು
* ಕಿಡ್ನಿ, ಲಿವರ್ ಸಂಬಂಧಿ ಸಮಸ್ಯೆಯಿದ್ದರೆ
* ಮಧುಮೇಹದ ಸಮಸ್ಯೆಯಿದ್ದರೆ
* ಗರ್ಭಿಣಿಯರು
* ಮಕ್ಕಳು
ಫ್ಲೂ ವೈರಸ್ ತಡೆಗಟ್ಟಲು ಏನು ಮಾಡಬೇಕು?
* ಕೈಗಳನ್ನು ಆಗಾಗ ತೊಳೆಯಿರಿ
* ಹ್ಯಾಂಡ್ ಸ್ಯಾನಿಟೈಸರ್ ಬಳಸಿ
* ಆಗಾಗ ಮೂಗು, ಬಾಯಿ ಮುಟ್ಟುವುದನ್ನು ಮಾಡಬೇಡಿ
* ಮನೆಯ ಒಳಗಡೆ ಗಾಳಿಯಾಡುವಂತಿರಲಿ
* ದೂಳು ಇದ್ದರೆ ತೆಗೆಯಿರಿ
ಫ್ಲೂ ಲಸಿಕೆ ಕೊರೊನಾ ವಿರುದ್ಧವೂ ರಕ್ಷಣೆ ನೀಡುತ್ತದೆ
* ಫ್ಲೂ ಲಸಿಕೆ ತೆಗೆದುಕೊಂಡಾಗ ಅದು ಇತರ ವೈರಸ್‌ಗಳ ವಿರುದ್ಧವೂ ಹೋರಾಡುವುದರಿಂದ ಕೊರೊನಾವೈರಸ್ ತಡೆಗಟ್ಟುತ್ತದೆ (ಮೈಲ್ಡ್ ವೈರಸ್).
ಫ್ಲೂ ಸಮಸ್ಯೆ ತಡೆಗಟ್ಟುವ ಜೀವನಶೈಲಿ
* ತುಂಬಾ ತರಕಾರಿ ಸೇವಿಸಿ
* ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ
* ಸಾಕ್ಟು ನಿದ್ದೆ ಮಾಡಿ
* ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ.