ಬದಿಯಡ್ಕ: ಬಡಗುಶಬರಿಮಲೆ ಸಮಾರಂ¨ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ಪೂಜ್ಯ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಡಿ.25ರಿಂದ ಜ.2ರ ತನಕ ನಡೆಯುವ ಬ್ರಹ್ಮಕಲಶೋತ್ಸವದ ಸಂದರ್ಭ ಡಿ.30ರಂದು ಶ್ರೀ ದೇವರ ಪ್ರತಿಷ್ಠಾ ದಿನದ ಧಾರ್ಮಿಕ ಸಭೆಗೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಪಾಲ್ಗೊಳ್ಳಲಿದ್ದು, ಅವರನ್ನು ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನಾಗೇಂದ್ರ ಭಾರದ್ವಾಜ್ ಆಹ್ವಾನಿಸಿದರು. ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಅವರನ್ನೂ ಭೇಟಿ ಮಾಡಿ ಜ.2 ರಂದು ನಡೆಯುವ ಸಮಾರೋಪಸಮಾರಂಭಕ್ಕೆ ಆಹ್ವಾನಿಸಲಾಯಿತು. ಉಬ್ರಂಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಣಿಕುಳ್ಳಾಯ, ಆಡಳಿತ ಸಮಿತಿ ಕಾರ್ಯದರ್ಶಿ ಕಿರಣ್ ಕುಣಿಕುಳ್ಳಾಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ, ಸಮಿತಿ ಉಪಾಧ್ಯಕ್ಷ ಶ್ರೀನಾಥ್ ಕೊಲ್ಲಂಗಾನ, ಅಚ್ಯುತ ಮಾಸ್ತರ್ ಅಗಲ್ಪಾಡಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಬು ಮಾಸ್ತರ್ ಆಗಲ್ಪಾಡಿ, ಮಾತೃ ಮಂಡಳಿ ಗೌರವಾಧ್ಯಕ್ಷೆ ವಸಂತಿ ಟೀಚರ್, ಮಾತೃ ಮಂಡಳಿ ಅಧ್ಯಕ್ಷೆ ಪ್ರತಿಭಾ ಜಯರಾಜ್, ಕಾರ್ಯದರ್ಶಿ ಬೇಬಿ ಸಿ. ಪಿ, ಯುವ ವಿಭಾಗದ ಅಧ್ಯಕ್ಷ ರಾಜೇಶ್ ಮಾಸ್ತರ್ ಆಗಲ್ಪಾಡಿ, ಧರ್ಮಶಾಸ್ತಾಸೇವಾ ಸಂಘದ ಪದಾಧಿಕಾರಿ ಸತೀಶ್ ಕುರುಪ್ ಉಬ್ರಂಗಳ, ಬ್ರಹ್ಮಕಲಶೋತ್ಸವ ಸಮಿತಿ ಪಧಾಧಿಕಾರಿಗಳಾದ ಶ್ರೀರಾಮ್ ಭಟ್ ಪಂಜಿರಿಕೆ, ದಾಮೋದರ ಉಬ್ರಂಗಳ, ಶಶಿಧರ ಉಬ್ರಂಗಳ, ಕೃಷ್ಣ ಮಣಿಯಾಣಿ, ಲೀಲಾವತಿ ಉಬ್ರಂಗಳ ಪಾಲ್ಗೊಂಡಿದ್ದರು.
ಉಬ್ರಂಗಳ ಕ್ಷೇತ್ರ ಬ್ರಹ್ಮಕಲಶ ಆಮಂತ್ರಣ ಬಿಡುಗಡೆ
0
ನವೆಂಬರ್ 09, 2022