ವಾಷಿಂಗ್ಟನ್: ಎಲೋನ್ ಮಸ್ಕ್ ಹೊಸದಾಗಿ ಸ್ವಾಧೀನಪಡಿಸಿಕೊಂಡಿರುವ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಭಾರತದಾದ್ಯಂತ ಬ್ಲೂ ಟಿಕ್ ಚಂದಾದಾರಿಕೆಯನ್ನು ಸಂಗ್ರಹಿಸುವ ಮುನ್ನ ಭಾರತ ಸರ್ಕಾರದ ಅಕೌಂಟ್ಗಳು ಮತ್ತು ಭಾರತೀಯ ಮಾಧ್ಯಮಗಳನ್ನು 'ಅಫೀಶಿಯಲ್' ಎಂದು ನೇಮಕ ಮಾಡಲು ಪ್ರಾರಂಭಿಸಿದೆ.ಟ್ವಿಟರ್‌ನ ನೀತಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದು ಇದನ್ನು ಎಲಾನ್ ಮಸ್ಕ್ ಎಫೆಕ್ಟ್ ಎಂದೇ ಕರೆಯಲಾಗುತ್ತಿದೆ.
ಭಾರತದ ವಿವಿಧ ಸರ್ಕಾರಿ ಸಂಸ್ಥೆಗಳ ಟ್ವಿಟರ್ ಹ್ಯಾಂಡಲ್‌ಗಳಲ್ಲಿ, 'ಅಫೀಶಿಯಲ್' ಎಂದು ಬರೆಯಲಾಗಿದೆ. ಪ್ರಧಾನಿ ಕಾರ್ಯಾಲಯ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಖಾತೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಟ್ವಿಟರ್ ಖಾತೆಯೂ 'ಅಫೀಶಿಯಲ್' ಎಂದು ಗುರುತಿಸಲ್ಪಟ್ಟಿದೆ.
ಮಂಗಳವಾರ (ನ.8) ಟ್ವಿಟರ್‌ನ ಕಾರ್ಯನಿರ್ವಾಹಕ ಎಸ್ತರ್ ಕ್ರಾಫೋರ್ಡ್ ಅವರು ಅಫೀಶಿಯಲ್ ಖಾತೆಗಳು ಮತ್ತು ನೀಲಿ ಟಿಕ್ಗಳಿಗೆ ಹಣ ಪಾವತಿಸುವವರ ನಡುವಿನ ಗೊಂದಲವನ್ನು ಕೊನೆಗೊಳಿಸಲು ಎರಡನೇ ಪರಿಶೀಲನಾ ಲೇಬಲ್ ಅನ್ನು ಹೊರತರುವುದಾಗಿ ಘೋಷಿಸಿದರು.
ಟ್ವಿಟರ್ನಿಂದ ಪರಿಶೀಲಿಸಲ್ಪಟ್ಟ ಖಾತೆಗಳು ಈಗ ತಮ್ಮ ಯೂಸರ್ನೇಮ್ ಕೆಳಗೆ ಅಫೀಶಿಯಲ್ ಎಂಬ ಲೇಬಲ್ ಹೊಂದಿರುತ್ತದೆ. ಈ ಖಾತೆಗಳು ಬೂದು ಬಣ್ಣದ ಚೆಕ್‌ಮಾರ್ಕ್ ಹೊಂದಿರುತ್ತವೆ ಎಂದು ಎಸ್ತರ್ ಕ್ರಾಫೋರ್ಡ್ ಮಾಹಿತಿ ನೀಡಿದ್ದಾರೆ.
ಅಧಿಕೃತ ಖಾತೆಗಳು ಮತ್ತು ಟ್ವಿಟರ್‌ನ ಬ್ಲೂ ಟಿಕ್ ಚಂದಾದಾರರ ನಡುವೆ ವ್ಯತ್ಯಾಸವನ್ನು ಗುರುತಿಸಲು ಬಳಕೆದಾರರಿಗೆ ಈ ಹೊಸ ಲೇಬಲ್ ಸಹಾಯ ಮಾಡಲಿದೆ. ಈ ಹಿಂದೆ ವೆರಿಫೈ ಆಗಿದ್ದ ಎಲ್ಲಾ ಖಾತೆಗಳಿಗೆ ಇನ್ನು ಮುಂದೆ ಅಫೀಶಿಯಲ್ ಗುರುತು ಇರದೇ ಕೆಲವು ಖಾತೆಗಳು ಮತ್ರ ಈ ಸೌಲಭ್ಯಗಳನ್ನು ಪಡೆಯಲಿವೆ. ಅದಲ್ಲದೇ ಈ ಲೇಬಲ್ಗಳನ್ನು ಯಾರಿಂದಲೂ ಖರೀದಿಸಲು ಸಾಧ್ಯವಿಲ್ಲ' ಎಂದು ಕ್ರಾಫೋರ್ಡ್ ಹೇಳಿದ್ದಾರೆ.