ಮಂಜೇಶ್ವರ: ಮೂರುದಿನಗಳಿಂದ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮತ್ತು ವಿದ್ಯಾವರ್ಧಕ ಎಯುಪಿ ಶಾಲೆಯಲ್ಲಿ ರಂಗೇರಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಶುಕ್ರವಾರ ಸಂಜೆ ಸಮಾರೋಪಗೊಂಡಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಉದ್ಘಾಟಿಸಿದರು.ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಬ್ಯಾಂಕ್ ಸಿಇಒ ಮಹಾಬಲೇಶ್ವರ, ಎಂ.ಎಸ್,ಹೇರಂಬ ಇಂಡಸ್ಟ್ರೀಸ್ ನ ಮಾಲಕ ಸದಾಶಿವ ಶೆಟ್ಟಿ ಕುಳೂರು ಮತ್ತು ಡಾ.ಡಿ.ಸಿ.ಚೌಟ ಮುಖ್ಯ ಅತಿಥಿಗಳಾಗಿದ್ದರು. ಬ್ಲಾಕ್ ಪಂಚಾಯತ್ ಸದಸ್ಯರಾದ ಕೆ.ವಿ.ಭಟ್,ಮೀಂಜ ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ, ಸರಸ್ವತಿ, ಕೃಷ್ಣ ಪ್ರಸಾದ್, ರುಕಿಯಾ ಸಿದ್ದಿಕ್, ಮಿಸ್ರಿಯ, ನಾರಾಯಣ ತುಂಗ, ಕುಟುಂಬ ಶ್ರಿ ಸಿಡಿಯಸ್ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ, ಸಂಚಾಲಕಿ ರಾಜೇಶ್ವರಿ ಎಸ್ ರಾವ್ ಮತ್ತು ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಆಡಳಿತ ಸಲೆಹೆಗಾರ ಶ್ರೀಧರ ರಾವ್ ಆರ್ ಎಮ್, ಹೆಚ್ ಎಂ ಫೆÇೀರಂನ ಅಧ್ಯಕ್ಷ ೀ ಆದಿನಾರಾಯಣ ಭಟ್, ಕಲೋತ್ಸವದ ಜನರಲ್ ಕನ್ವಿನರ್ ಶಿವಶಂಕರ್ ಮತ್ತು ಪ್ರಾಂಶುಪಾಲ ರಮೇಶ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದಾಕ್ಷ ಭಂಡಾರಿ ಸ್ವಗತಿಸಿ, ರಾಜಾರಮ್ ಕಾರ್ಯಕ್ರಮ ನಿರೂಪಿಸಿದರು. ಕಿರಣ್ ಕೆ.ಎಸ್ ವಂದಿಸಿದರು.
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾರೋಪ
0
ನವೆಂಬರ್ 27, 2022