ಗುವಾಹತಿ: ವನ್ಯ ಜೀವಿಗಳ ಬೇಟೆಗಾರರ ಜಾಡು ಹಿಡಿಯುವಲ್ಲಿ ಕಾರ್ಯ ನಿರ್ವಹಿಸಿದ್ದ ಭಾರತದ ಮೊದಲ ಶ್ವಾನ ರೊರ್ಬಾ (Rorba the dog)(12 ವರ್ಷ) ಗುವಾಹತಿಯಲ್ಲಿ ಮಂಗಳವಾರ ಸಾವನ್ನಾಪ್ಪಿದೆ
ಗಂಡು ಶ್ವಾನವಾಗಿರುವ ರೊರ್ಬಾ ವನ್ಯ ಜೀವಿಗಳ ಬೇಟೆಗಾರರ ವಿರುದ್ಧ ರೂಪಿಸಲಾಗಿದ್ದ ದೇಶದ ಮೊದಲ ಶ್ವಾನ ದಳ 'ಕೆ9'ನ ಸದಸ್ಯ.
ಈ ಶ್ವಾನ 60ಕ್ಕೂ ಅಧಿಕ ವನ್ಯ ಜೀವಿ ಬೇಟೆಗಾರರನ್ನು ಬಂಧಿಸಲು ನೆರವಾಗಿತ್ತು. ವನ್ಯ ಜೀವಿ ಹೋರಾಟಗಾರರು ರೆರ್ಬಾಕ್ಕೆ ಮಂಗಳವಾರ ಇಲ್ಲಿ ಅಂತ್ಯಕ್ರಿಯೆ ನಡೆಸಿದರು.
ರೊರ್ಬಾ 2012ರಿಂದ ನಿವೃತ್ತರಾಗುವ ವರೆಗೆ ಹೆಚ್ಚಾಗಿ ಕಾಝಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸೇವೆ ಸಲ್ಲಿಸಿದೆ. ಘೇಂಡಾ ಮೃಗಗಳನ್ನು ಬೇಟೆಯಾಡುತ್ತಿರುವವರನ್ನು ಬಂಧಿಸಲು ರೆರ್ಬಾ ಅಧಿಕಾರಿಗಳಿಗೆ ನೆರವು ನೀಡಿದೆ. ಹಲವು ಸಂದರ್ಭಗಳಲ್ಲಿ ಇತರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕೂಡ ರೆರ್ಬಾ ಸೇವೆ ಸಲ್ಲಿಸಿದೆ.
ರೆರ್ಬಾ 2019ರಲ್ಲಿ ಸೇವೆಯಿಂದ ನಿವೃತ್ತವಾಯಿತು. ಅದು ಸಲ್ಲಿಸಿದ ಸೇವೆಗಾಗಿ ಅಸ್ಸಾಮಿನ ಸಾಂಪ್ರದಾಯಿಕ 'ಗಾಮೋಸ'('Gamosa') ಹೊದಿಸಿ ಗೌರವಿಸಲಾಗಿತ್ತು. ಅಲ್ಲದೆ, ಈ ವರ್ಷ ಸ್ವಾತಂತ್ರ ದಿನಾಚರಣೆಯ ಸಂದರ್ಭ ಪ್ರಸಂಶಾ ಪತ್ರವನ್ನು ನೀಡಿ ಗೌರವಿಸಲಾಗಿತ್ತು.