ಕೋಝಿಕ್ಕೋಡ್: ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ರಾಜ್ಯ ಕೇರಳವಾಗಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ ಕಾಶಿನಾಥ ಮರಾಠೆ ಹೇಳಿದ್ದಾರೆ.
ಕೇವಲ 12 ಲಕ್ಷ ಜನಸಂಖ್ಯೆ ಹೊಂದಿರುವ ಗೋವಾ 10 ಲಕ್ಷ ಪ್ರವಾಸಿಗರನ್ನು ಪಡೆಯುತ್ತದೆ. ಹಾಗಾಗಿ ಅಲ್ಲಿನ ದೊಡ್ಡ ಕೈಗಾರಿಕಾ ಯೋಜನೆಗಳ ಬಗ್ಗೆ ಅವರು ಯೋಚಿಸುತ್ತಿಲ್ಲ. ಕೇರಳ ಕೂಡ ಸಾಕಷ್ಟು ಪ್ರವಾಸೋದ್ಯಮ ಸಾಮಥ್ರ್ಯವನ್ನು ಹೊಂದಿದೆ. ಆತಿಥ್ಯ ಮತ್ತು ಪ್ರವಾಸೋದ್ಯಮವನ್ನು ಕೇಂದ್ರೀಕರಿಸುವ ಸಣ್ಣ ಪ್ರವಾಸೋದ್ಯಮ ಯೋಜನೆಗಳು ಇಲ್ಲಿ ಅಗತ್ಯವಿದೆ ಎಂದರು.
ಮಾದ್ಯಮವೊಂದರ ನೇತೃತ್ವದಲ್ಲಿ ಬ್ಯಾಂಕಿಂಗ್, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದ ಜನರೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಮಾಜಿ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ವರ್ಮಾ ವಿಷಯ ಮಂಡಿಸಿದರು. ಪತ್ರಕರ್ತ ಕಾವಳಂ ಶಶಿಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ನಿತ್ಯಾನಂದ ಕಾಮತ್, ಅಖಿಲ ಕೇರಳ ಸರ್ಕಾರಿ ಬ್ಯಾಂಕರ್‍ಗಳ ಸಂಘದ ಪ್ರತಿನಿಧಿ ಮೋಹನ್ ಕುಮಾರ್, ಅಕ್ಷಯ್ ಮುರಳಿ, ಗಂಗಾಧರನ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಕೇರಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶಗಳಿದ್ದರೂ ಬಳಸಲಾಗುತ್ತಿಲ್ಲ: ಆರ್‍ಬಿಐ ನಿರ್ದೇಶಕ ಸತೀಶ್ ಮರಾಠೆ
0
ನವೆಂಬರ್ 12, 2022