ನವದೆಹಲಿ: ಹಸಿರುಮನೆ ಅನಿಲ ಹೊರಸೂಸುವ ನಾಲ್ಕು ಪ್ರಮುಖ ದೇಶಗಳ ಪೈಕಿ ಚೀನಾ, ಯುರೋಪಿಯನ್ ಒಕ್ಕೂಟ ಮತ್ತು ಭಾರತ, ರಾಷ್ಟ್ರೀಯ ಯೋಜನೆಗಳಲ್ಲಿ ನಿಗದಿಪಡಿಸಿರುವುದಕ್ಕಿಂತ ಸ್ವಚ್ಛ ಇಂಧನ ಆರ್ಥಿಕತೆ ಕಡೆಗೆ ವೇಗವಾಗಿ ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಈಜಿಪ್ಟ್‌ನಲ್ಲಿ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ನಡೆಯುತ್ತಿರುವ ಸಂದರ್ಭದಲ್ಲೇ ಸೋಮವಾರ ಬಿಡುಗಡೆಯಾದ ಹೊಸ ವಿಶ್ಲೇಷಣೆ ತಿಳಿಸಿದೆ.
'ಗ್ಲೋಬಲ್ ಕಾರ್ಬನ್ ಬಜೆಟ್ ವರದಿ 2022'ರ ಪ್ರಕಾರ 2021 ರಲ್ಲಿ ಮೊದಲ ನಾಲ್ಕು ಕಾರ್ಬನ್ ಡೈಆಕ್ಸೈಡ್ ಹೊರಸೂಸುವ ದೇಶಗಳು ಚೀನಾ (ಶೇ 31 ), ಅಮೆರಿಕ (ಶೇ 14), ಯುರೋಪಿಯನ್ ಒಕ್ಕೂಟ (ಶೇ 8) ಮತ್ತು ಭಾರತ (ಶೇ 7).
ಪಳೆಯುಳಿಕೆ ಇಂಧನ ಪರ್ಯಾಯಗಳಿಗಿಂತ ಪವನ ಮತ್ತು ಸೌರಶಕ್ತಿ ಅಗ್ಗಗೊಳಿಸುವ ತ್ವರಿತ ಬೆಲೆ ಕಡಿತ, ಇಂಧನ ಭದ್ರತೆ ಮತ್ತು ಪ್ರವೇಶದ ಬಗ್ಗೆ ಕಾಳಜಿಗಳು ಮತ್ತು ಯುರೋಪ್‌ನಲ್ಲಿ ಉಕ್ರೇನ್‌ಗೆ ಬೆಂಬಲ ವೇಗ ಹೆಚ್ಚುಸುತ್ತಿದೆ.
ಮೂರು ದೇಶಗಳಲ್ಲಿ ಈ ಶಕ್ತಿಗಳು ಪ್ಯಾರಿಸ್ ಒಪ್ಪಂದದ ಅಡಿ ಹೊರಸೂಸುವಿಕೆಯ ಗುರಿಗಳನ್ನು ಮೀರಿಸುವ ಹಾದಿಯಲ್ಲಿರಬಹುದು. ಇದು ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಹೆಚ್ಚು ಸಕಾರಾತ್ಮಕ ಚಿತ್ರಣ ಸೂಚಿಸುತ್ತದೆ ಎಂದು ವರದಿ ತಿಳಿಸಿದೆ.