ಎರ್ನಾಕುಳಂ: ಶಬರಿಮಲೆಯಲ್ಲಿ ಅಪ್ಪ ಮತ್ತು ಅರವಣ ದಾಸ್ತಾನು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ಸೂಚನೆ ನೀಡಿದೆ. ವಿಶೇಷ ಆಯುಕ್ತರು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ನ ದೇವಸ್ವಂ ಪೀಠ ದಿಂದ ಈ ಆದೇಶ ಬಂದಿದೆ.
ಗುರುವಾರದೊಳಗೆ ವರದಿ ಸಲ್ಲಿಸಬೇಕು. ಅರವಣ ಟಿನ್ ಪೂರೈಕೆಯಲ್ಲಿ ಕೊರತೆಯಾಗದಂತೆ ದೇವಸ್ವಂ ಮಂಡಳಿ ಕ್ರಮಕೈಗೊಳ್ಳಬೇಕು. ಅರವಣ ಟಿನ್ ಪೂರೈಕೆಯಲ್ಲಿ ಗುತ್ತಿಗೆದಾರರು ಲೋಪ ಎಸಗಿದರೆ ಕಠಿಣ ಕ್ರಮಕ್ಕೂ ಆದೇಶಿಸಲಾಗಿದೆ.
ಗುತ್ತಿಗೆದಾರರು ಅಗತ್ಯ ಅರವಣ ಟಿನ್ ಪೂರೈಸುತ್ತಿಲ್ಲ ಎಂದು ವಿಶೇಷ ಆಯುಕ್ತರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಆದೇಶ ನೀಡಲಾಗಿದೆ.
ಪ್ರಸ್ತುತ 25 ದಿನಗಳಿಗೆ ಪೂರೈಸಲು ಸಾಕಷ್ಟು ಅರವಣ ಟಿನ್ ದಾಸ್ತಾನು ಇದೆ ಎಂದು ದೇವಸ್ವಂ ಮಂಡಳಿ ನ್ಯಾಯಾಲಯಕ್ಕೆ ತಿಳಿಸಿದೆ.
ಅಪ್ಪ ಪ್ರಸಾದ ಮತ್ತು ಅರವಣ ದಾಸ್ತಾನು ಖಚಿತಪಡಿಸಿಕೊಳ್ಳಲು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚನೆ
0
ನವೆಂಬರ್ 23, 2022
Tags