ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವμರ್Áವಧಿ ಷಷ್ಠಿ ಮಹೋತ್ಸವ ನ. 29 ಮತ್ತು 30 ರಂದು(ವೃಶ್ಚಿಕ ಮಾಸ 13 ಮತ್ತು 14)ಕ್ಷೇತ್ರ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ಕಾರ್ಮಿಕತ್ವದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ನ.28 ರಂದು ಸಂಜೆ 7 ರಿಂದ ವಾಸ್ತು ಬಲಿ, ರಕ್ಷೋಘ್ನ, ಅತ್ತಾಳ ಪೂಜೆ ನಡೆಯಲಿದೆ. ನ.29 ರಂದು ಬೆಳಗ್ಗೆ 6 ರಿಂದ
ಅಭಿಷೇಕ ಪೂಜೆ, ಉಷಃಪೂಜೆ, ಗಣಹೋಮ, ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಲಿದೆ. ನ.29 ರಮದು ಸಂಜೆ 06.45 ಕ್ಕೆ ಮೂಡುಮನೆ ಬಳ್ಳುಳ್ಳಾಯ ತರವಾಡು ಮನೆಯಿಂದ ಭಂಡಾರ ಆಗಮನ, 6.30 ಕ್ಕೆ ದೀಪಾರಾಧನೆ,
ರಾತ್ರಿ 7.ಕ್ಕೆ ತೊಡಂಗಲ್, 7.30 ಕ್ಕೆ ರಾತ್ರಿ ಪೂಜೆ, 7.45 ಕ್ಕೆ ದೇವರ ಬಲಿ ಹೊರಡುವುದು, ಶ್ರೀ ಭೂತಬಲಿ, 8.45 ಕೋಟೂರು ಕಟ್ಟೆ ಸವಾರಿ, 8.50 ಶ್ರೀದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಲ್ಲ, ಮುಳಿಯಾರು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. 10.30 ಕ್ಕೆ ಶ್ರೀ ದೇವರ ಕೋಟೂರು ಕಟ್ಟೆ ಸವಾರಿ ಹಿಂತಿರುಗುವುದು. ಬಳಿಕ ಕಟ್ಟೆಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ ನಡೆಯಲಿದೆ. ನ. 30 ರಂದು ಬುಧವಾರ ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ, ಬೆಳಗ್ಗೆ 10.ಕ್ಕೆ ಶಿವೇಲಿ, ರಾಜಾಂಗಣದಲ್ಲಿ ದರ್ಶನಬಲಿ, ಬಟ್ಟಲುಕಾಣಿಕೆ, ಮಧ್ಯಾಹ್ನ ಪೂಜೆ, ಮಂತ್ರಾಕ್ಷತೆ, ಮಧ್ಯಾಹ್ನ 1. ರಿಂದ ಶ್ರೀ ವಿಷ್ಣುಮುರ್ತಿ ದೈವದ ಕೋಲ, ಸಂಜೆ 6.30 ಕ್ಕೆ ದೀಪಾರಾಧನೆ, ರಾತ್ರಿ 7.30 ಕ್ಕೆ ಶ್ರೀರಂಗಪೂಜೆ ನಡೆಯಲಿದೆ.
ಮುಳಿಯಾರು ಷಷ್ಠಿ ಮಹೋತ್ಸವ
0
ನವೆಂಬರ್ 25, 2022
Tags