ಮಂಜೇಶ್ವರ :ಒಡಿಯೂರು ಚಾರಿಟೇಬಲ್ ಟ್ರಸ್ಟ್, ಒಡಿಯೂರು ಗ್ರಾಮ ವಿಕಾಸ ಯೋಜನೆಯ ವರ್ಕಾಡಿ ಘಟಕ ಸಮಿತಿ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆ ನ. 25ರಂದು ವರ್ಕಾಡಿ ಸುಂಕದಕಟ್ಟೆ ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರದಲ್ಲಿ ಜರುಗಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಶುಭಾಶೀರ್ವಾದದೊಂದಿಗೆ ಕರ್ಯಕ್ರಮ ನಡೆಯುವುದು.
ಬೆಳಗ್ಗೆ 9ಕ್ಕೆ ಶ್ರೀ ಸತ್ಯದತ್ತ ವ್ರತ ಪೂಜೆ ಆರಂಭಗೊಳ್ಳುವುದು. 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಒಡಿಯೂರು ಗ್ರಾಮ ವಿಕಾಸ ಯೋಜನೆ ವರ್ಕಾಡಿ ಘಟಕ ಅಧ್ಯಕ್ಷ ವಿಶ್ವನಾಥ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12.30ಕ್ಕೆ ಪೂಜೆ ಮಹಾಮಂಗಳಾರತಿ ನಡೆಯುವುದು.
ಇಂದು ಸುಂಕದಕಟ್ಟೆಯಲ್ಲಿ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆ
0
ನವೆಂಬರ್ 24, 2022
Tags