ನವದೆಹಲಿ: ನಾಗರಿಕ ರಕ್ಷಣಾ ಸೇವೆಗಳಿಗೆ ದೈಹಿಕ ಭಿನ್ನಸಾಮರ್ಥ್ಯದ ಅಭ್ಯರ್ಥಿಗಳ ನೇವಕಾತಿ ಸಾಧ್ಯತೆಯ ಅವಕಾಶಗಳನ್ನು ಹುಡುಕುವಂತೆ ಸುಪ್ರೀಂಕೋರ್ಟ್(Supreme Court) ಕೇಂದ್ರ ಸರಕಾರಕ್ಕೆ ಬುಧವಾರ ನಿರ್ದೇಶನ ನೀಡಿದೆ. ಆದರೆ ಇದೇ ವೇಳೆ ಈ ನಿರ್ಧಾರದ ಅನುಷ್ಠಾನವು ಎಷ್ಟರ ಮಟ್ಟಿಗೆ ಕಾರ್ಯಸಾಧ್ಯವೆಂಬುದನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಅದು ಸೂಚಿಸಿದೆ.
ದೈಹಿಕ ಭಿನ್ನಸಾಮರ್ಥ್ಯದ ಅಭ್ಯರ್ಥಿಗಳು ನಾಗರಿಕ ರಕ್ಷಣಾ ಸೇವೆಗಳಲ್ಲಿನ ಎಲ್ಲಾ ಶ್ರೇಣಿಗಳ ಸರಿಹೊಂದದೇ ಇರಬಹುದು ಎಂದು ನ್ಯಾಯಪೀಠ ತಿಳಿಸಿತು. ಆದಾಗ್ಯೂ ಭಿನ್ನಸಾಮರ್ಥ್ಯದ ವ್ಯಕ್ತಿಗಳ ನೇಮಕಾತಿಯಲ್ಲಿ ಅನುಕಂಪ ಹಾಗೂ ಕಾರ್ಯಸಾಧ್ಯತೆ ಈ ಎರಡೂ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.
ಕೇಂದ್ರ
ಸರಕಾರದ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ಅಟಾರ್ನಿ ಜನರರ್ ಆರ್.ವೆಂಕಟರಾಮನ್ (R.
Venkataraman)ಅವರು ಈ ವಿಷಯದ ಬಗ್ಗೆ ಸರಕಾರ ಪರಿಶೀಲಿಸುತ್ತಿದೆ ಹಾಗೂ ಅದರ
ಅಭಿಪ್ರಾಯವನ್ನು ತಿಳಿಸಲು ತನಗೆ ಹೆಚ್ಚಿನ ಕಾಲಾವಕಾಶಬೇಕೆಂದು ಕೋರಿದರು.
ಪ್ರಕರಣದ
ಮುಂದಿನ ವಿಚಾರಣೆಯನ್ನು 2023ರ ಜನವರಿಯಲ್ಲಿ ನಡೆಸುವುದಾಗಿ ನ್ಯಾಯಾಲಯ ಸೂಚಿಸಿತ್ತು.
ದೈಹಿಕ ಭಿನ್ನ ಸಾಮರ್ಥ್ಯದ ಅಭ್ಯರ್ಥಿಗಳಿಗೆ ನಾಗರಿಕ ರಕ್ಷಣಾ ಸೇವೆಗಳಲ್ಲಿ ನೇಮಕಾತಿಗೆ
ಅವಕಾಶ ನೀಡಬೇಕೆಂದು ಕೋರಿ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಹಕ್ಕುಗಳಿಗಾಗಿನ ರಾಷ್ಟ್ರೀಯ
ವೇದಿಕೆ ಸುಪ್ರೀಂಕೋರ್ಟ್ಗೆ ಈ ವರ್ಷದ ಆರಂಭದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.
ಈ
ಸಂಬಂಧ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ಮಧ್ಯಂತರ ಆದೇಶವೊಂದರಲ್ಲಿ ನಾಗರಿಕ ಸೇವೆಗಳ
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ದೈಹಿಕ ಭಿನ್ನಸಾಮರ್ಥ್ಯದ ಅಭ್ಯರ್ಥಿಗಳು ಭಾರತೀಯ
ಪೊಲೀಸ್ ಸೇವೆ, ಭಾರತೀಯ ರೈಲ್ವೆ ರಕ್ಷಣಾ ಪಡೆಗಳ ಸೇವೆ, ದಿಲ್ಲಿ, ದಾಮನ್-ದಿಯು(Delhi,
Daman-diu), ದಾದ್ರಾ-ನಗರಹವೇಲಿ(Dadra-Nagarhaveli),
ಅಂಡಮಾನ್-ನಿಕೋಬಾರ್(Andaman-Nicobar) ಹಾಗೂ ಲಕ್ಷದ್ವೀಪ (Lakshadweep)ಪೊಲೀಸ್
ಸೇವೆಗಳಿಗೆ ಆಯ್ಕೆ ಕೋರಿ ಅರ್ಜಿ ಸಲ್ಲಿಸಬಹುದೆಂದು ಸೂಚಿಸಿತ್ತು.