ಕಾಸರಗೋಡು: ಕಾಸರಗೋಡಿನ ನೆಲದಲ್ಲಿ ಎಂಡೋಸಲ್ಫಾನ್ ದುಃಸ್ಥಿತಿ ಉಳಿದಿರುವ ಜನತೆಯ ಪ್ರತೀಕವಾಗಲು ಹೊರಟಿದೆ.
ಜಿಲ್ಲಾ ಪಂಚಾಯತ್ ಮುಂಭಾಗದಲ್ಲಿ ತಾಯಿ ಮತ್ತು ಮಗುವಿನ ಶಿಲ್ಪ ಇದನ್ನು ಸಾಕಾರಗೊಳಿಸಲಿದೆ. ಮುಂದಿನ ವರ್ಷ ಜನವರಿ ವೇಳೆಗೆ ಶಿಲ್ಪ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಶಿಲ್ಪಿ ಕಾನಾಯಿ ಕುಂಞÂ್ಞ ರಾಮನ್ ತಿಳಿಸಿದ್ದಾರೆ. ತಾಯಿ ಮತ್ತು ಇಬ್ಬರು ಶಿಶುಗಳನ್ನು ಒಳಗೊಂಡಿರುವ ಈ ಶಿಲ್ಪವು ಎಂಡೋಸಲ್ಫಾನ್ ಸಂಕಷ್ಟದ ಪ್ರತೀಕವಾಗಿದೆ. ಕಾನಾಯಿ ಕುಂಞÂ ರಾಮನ್ ನೇತೃತ್ವದಲ್ಲಿ ಮತ್ತೆ ಶಿಲ್ಪ ನಿರ್ಮಾಣ ಕಾರ್ಯ ಆರಂಭವಾಗಿದೆ. ನಲವತ್ತು ಅಡಿ ಎತ್ತರದ ಶಿಲ್ಪವನ್ನು ತಯಾರಿಸುವ ಪೂರಕ ಕೆಲಸಕ್ಕಾಗಿ ನಾಗರಕೋಯಿಲ್‍ನಿಂದ ಆರು ಜನರ ಕಾರ್ಮಿಕರ ತಂಡವೂ ಇದೆ.
2006ರಲ್ಲಿ ಎಂ.ವಿ.ಬಾಲಕೃಷ್ಣನ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಕಾನಾಯಿ ಕುಂಞÂ ರಾಮನ್ ಅವರು 20 ಲಕ್ಷ ರೂಪಾಯಿ ಮಂಜೂರು ಮಾಡಿ ಎಂಡೋಸಲ್ಫಾನ್ ದುಃಸ್ಥಿತಿಯ ಪ್ರತೀಕವಾಗಿ ಶಿಲ್ಪಕಲೆ ನಿರ್ಮಿಸುವ ಆಲೋಚನೆ ಹಂಚಿಕೊಂಡಿದ್ದರು. ನಂತರ ಜಿಲ್ಲಾ ಯೋಜನಾ ಸಮಿತಿ ಅನುಮೋದನೆ ನೀಡಿತು. ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ಬದಲಾವಣೆಯಿಂದ ಮೂರ್ತಿ ನಿರ್ಮಾಣವೂ ನಿಂತು ಹೋಗಿತ್ತು. ನಂತರ 2019 ರಲ್ಲಿ ನಿರ್ಮಾಣ ಪ್ರಾರಂಭವಾಯಿತು, ಆದರೆ ಕೋವಿಡ್ ಮತ್ತು ಲಾಕ್‍ಡೌನ್‍ನಲ್ಲಿ ಸಿಲುಕಿ ಅರ್ಧಕ್ಕೆ ನಿಂತಿತು.. ಈಗ ಮಳೆಗಾಲ ಮುಗಿದು ನಿರ್ಮಾಣ ಪುನರಾರಂಭಿಸಲಾಗಿದೆ.